Mysore
26
scattered clouds
Light
Dark

ಕೆಆರ್‌ಎಸ್‌ ಮಾದರಿಯಲ್ಲಿ ಕಬಿನಿಯಲ್ಲಿ ಉದ್ಯಾನವನ ನಿರ್ಮಾಣ: ಅನಿಲ್‌ ಚಿಕ್ಕಮಾದು

ಮೈಸೂರು: ಕೆಆರ್‌ಎಸ್‌ (ಕೃಷ್ಣರಾಜ ಸಾಗರ) ಮಾದರಿಯಲ್ಲಿ ಕಬಿನಿ ಜಲಾಶಯದ ಬಳಿಯೂ ಸಹಾ ಉದ್ಯಾನವನ ನಿರ್ಮಿಸಲಾಗುವುದು ಎಂದು ಎಚ್‌ಡಿ ಕೋಟೆ ಶಾಸಕ ಅನಿಲ್‌ ಚಿಕ್ಕಮಾದು ಹೇಳಿದರು.

ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಬಿನಿಯಲ್ಲಿ ಉದ್ಯಾನವನ ನಿರ್ಮಾಣ ಸಂಬಂಧ 30 ಕೋಟಿ ರೂ. ಅಂದಾಜುಪಟ್ಟಿ ಸಿದ್ದಪಡಿಸಲಾಗಿದೆ. ಶೀಘ್ರದಲ್ಲೇ ಕಾರ್ಯಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಮೂರು ಜಲಾಶಯಗಳು, ಅಭಯಾರಣ್ಯ ಮತ್ತು ಪ್ರಾಕೃತಿಕ ಸಂಪತ್ತು ಹೇರಳವಾಗಿ ಸಿಗುವ ಎಚ್‌ಡಿ ಕೋಟೆ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಹಾಗಾಗಿ ತಾಲೂಕಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.

ಇನ್ನು ಕಬಿನಿ ಜಲಾಶಯದಲ್ಲಿ ಬಿರುಕು ಕಂಡಿರುವ ಬಗ್ಗೆ ಮಾತನಾಡಿ, ಈ ದುರಸ್ತಿ ಕಾರ್ಯಕ್ಕೆ ಜಲಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ್‌ ಅವರು 6 ಕೋಟಿ ರೂ ದುರಸ್ತಿ ವೆಚ್ಚ ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಶ್ರೀಘ್ರದಲ್ಲೇ ಎಲ್ಲಾ ಕಾರ್ಯಾರಂಭ ಮಾಡಲಾಗುದು ಎಂದರು.