ಮೈಸೂರು : ರಾಜ್ಯ ಕಾಂಗ್ರೆಸ್ ಪಾಳಾಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗುರುವಾರ ದಿಲ್ಲಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ 2028 ರಲ್ಲೂ ನನ್ನದೇ ನೇತೃತ್ವದಲ್ಲಿ ಚುನಾವಣಾ ನಡೆಯಲಿದೆ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅದರೂ ಕೈ ಪಾಳಯದ ಇತರ ನಾಯಕರು ಗೊಂದಲ ಸೃಷ್ಟಿಸುತ್ತಲೇ ಇದ್ದರೆ. ಸದ್ಯ ಈ ವಿಚಾರವಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು ಹೀಗೆ…
“ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯ ಮಾತನಾಡಬಾರದು. ನಮ್ಮಲ್ಲಿ ಹೈಕಮಾಂಡ್ ಅಂತ ಇದೆ. ಎಲ್ಲ ಗೊಂದಲವನ್ನು ಅವರು ನಿವಾರಿಸುತ್ತಾರೆ. ಈಗಾಗಲೇ ನಿನ್ನೆ ಈ ವಿಚಾರವಾಗಿ ಸಿದ್ದರಾಮಯ್ಯ ಅವರೇ ಸ್ಪಷ್ಟ ಪಡಿಸಿದ್ದಾರೆ. 5 ವರ್ಷ ಅವರೇ ಸಿಎಂ ಆಗಿ ಇರ್ತಾರೆ” ಎಂದು ಸಿದ್ದರಾಮಯ್ಯ ಅವರ ಮಾತನ್ನು ಬೆಂಬಲಿ ಮಾತನಾಡಿದರು.
ನಾನು ಬೇರೇ ಏನೂ ಹೇಳಲು ಬಯಸುವುದಿಲ್ಲ, ಪವರ್ ಶೇರಿಂಗ್ ಬಗ್ಗೆ ಮಾತುಕತೆ ನಮ್ಮ ತನಕ ಬಂದಿಲ್ಲ. ಈ ವಿಚಾರ ಪ್ರಸ್ತಾಪ ಆಗಿದ್ಯಾ , ಗೊತ್ತಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದಿದ್ದಾರೆ.





