Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಹುಣಸೂರಿನಲ್ಲಿ ನಾಲ್ಕು ಹುಲಿ ಮರಿಗಳ ಸೆರೆ

ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿಯ ಗೌಡನಕಟ್ಟೆ ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ತಾಯಿ ಹುಲಿ ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಇಂದು ನಾಲ್ಕು ಮರಿ ಹುಲಿಗಳನ್ನು ಸೆರೆ ಹಿಡಿದಿದ್ದಾರೆ.

ಗ್ರಾಮದ ಹೊರವಲಯದಲ್ಲಿ ಅಡಗಿದ್ದ ನಾಲ್ಕು ಮರಿ ಹುಲಿಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಅಗತ್ಯ ಚಿಕಿತ್ಸೆ ನೀಡಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಗ್ರಾಮದ ಜೋಳದ ಹೊಲದಲ್ಲಿ ಮಧ್ಯರಾತ್ರಿ ತಾಯಿ ಹುಲಿಯನ್ನು ಹಿಡಿಯಲಾಗಿತ್ತು. ಮರಿ ಹುಲಿಗಳಿಗಾಗಿ ಕಾರ್ಯಚರಣೆ ಮುಂದುವರಿಸಲಾಗಿತ್ತು. ತಾಯಿ ಹುಲಿ ಬಳಿಕ ಮರಿ ಹುಲಿಗಳನ್ನು ಸೆರೆ ಹಿಡಿದಿರುವುದರಿಂದ ಗ್ರಾಮಸ್ಥರು ನಿರಾಳರಾಗಿದ್ದಾರೆ.

Tags:
error: Content is protected !!