ಮೈಸೂರು: ಕಾಡಂಚಿನ ಭಾಗಗಳಲ್ಲಿ ಹುಲಿ ದಾಳಿಯಿಂದ ಬೆಚ್ಚಿ ಬಿದ್ದಿರುವ ರೈತರು ಹಾಗೂ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಹೊಸ ಭರವಸೆ ನೀಡಿದೆ.
ಫೇಸ್ ಮಾಸ್ಕ್ ಧರಿಸಿದರೆ ಹುಲಿ ದಾಳಿ ಮಾಡಲು ಕನ್‌ಫ್ಯೂಸ್ ಆಗಲಿದೆ ಎಂದು ಅರಣ್ಯ ಇಲಾಖೆ ಲೆಕ್ಕಾಚಾರವಾಗಿದ್ದು, ಹುಲಿಯು ಹಿಂಬದಿಯಿಂದ ಜನರ ಮೇಲೆ ದಾಳಿ ನಡೆಸುತ್ತದೆ ಎಂದು ಅರಣ್ಯ ಇಲಾಖೆ ಫೇಸ್ ಮಾಸ್ಕ್ ಅನ್ನು ವಿತರಣೆ ಮಾಡುತ್ತಿದೆ.
ವ್ಯಾಘ್ರನ ದಾಳಿ ತಡೆಗೆ ಮುಖವಾಡ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 10 ಸಾವಿರ ಜನರಿಗೆ ಫೇಸ್ ಮಾಸ್ಕ್ ವಿತರಣೆ ಮಾಡಲು ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ಸುಂದರ್‌ಬನ್ ದ್ವೀಪದಲ್ಲಿ ಮಾಸ್ಕ್ ಬಳಕೆ ಮಾಡಿಕೊಂಡು ಜನರು ಹುಲಿ ದಾಳಿಯಿಂದ ಬಚಾವಾಗುತ್ತಿದ್ದಾರೆ. ಅದೇ ಮಾದರಿಯ ಪ್ರಯೋಗವನ್ನು ಬಂಡೀಪುರ, ನಾಗರಹೊಳೆ ಕಾಡಂಚಿನ ಗ್ರಾಮಗಳಲ್ಲಿ ಮಾಡಲಾಗುತ್ತಿದೆ.





