ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಪ್ರಾಣಿ ಪ್ರಿಯರು ವಾನರಗಳಿಗೆ ಆಹಾರ ವಿತರಣೆ ಮಾಡಿದರು.
ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ನಗರದಾದ್ಯಂತ ಅನೇಕ ಸಂಘ-ಸಂಸ್ಥೆಗಳು, ಸಾರ್ವಜನಿಕರು ಪ್ರಸಾದವನ್ನು ಮನುಷ್ಯರಿಗೆ ವಿತರಿಸುವುದನ್ನು ಕಂಡಿದ್ದೇವೆ. ಅದನ್ನು ಕೆಎಂಪಿಕೆ ಟ್ರಸ್ಟ್ ಪ್ರಾಣಿಗಳಿಗೂ ಸಹ ವಿಸ್ತರಣೆ ಮಾಡಿದೆ.
ಕೆಎಂಪಿಕೆ ಟ್ರಸ್ಟ್‌ನ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ಅವರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಇಂದು ವಾನರಗಳಿಗೆ ಕಡಲೆಕಾಯಿ ಹಾಗೂ ಬಾಳೆಹಣ್ಣುಗಳನ್ನು ನೀಡಿ ಭಕ್ತಿ-ಭಾವದ ಜೊತೆ ಪ್ರಾಣಿ ಪ್ರಿಯತೆಯನ್ನು ಪ್ರದರ್ಶಿಸಿದ್ದಾರೆ.





