ಮೈಸೂರು: ಕೇರಳದಲ್ಲಿ ಭಾರಿ ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹೀಗಾಗಿ,ಕಬಿನಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕಬಿನಿಯ ಒಳಹರಿವು ಹೆಚ್ಚಿದ್ದರಿಂದ ಹೊರಹರಿವನ್ನು ಹೆಚ್ಚಿಸಲಾಗಿದೆ.
ಕಬಿನಿ ಅಣೆಕಟ್ಟೆಗೆ 20,000 ಕ್ಯುಸೆಕ್ ಒಳಹರಿವು ಇದೆ. ಹೀಗಾಗಿ 25 ರಿಂದ 30 ಸಾವಿರ ಕ್ಯುಸೆಕ್ ನದಿಗೆ ಬಿಡಲು ಕಾವೇರಿ ನೀರಾವರಿ ನಿಗಮವು ತೀರ್ಮಾನಿಸಿದೆ. ಹೊರ ಹರಿವು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ನದಿ ಪಾತ್ರದ ಜನರು ಸುರಕ್ಷತ ಪ್ರದೇಶಕ್ಕೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.





