Mysore
22
overcast clouds

Social Media

ಶುಕ್ರವಾರ, 13 ಜೂನ್ 2025
Light
Dark

ವಯನಾಡಿನಲ್ಲಿ ಭಾರೀ ಮಳೆ: ನಂಜನಗೂಡಿಗೆ ಪ್ರವಾಹದ ಭೀತಿ

ಮೈಸೂರು: ಕೇರಳದ ವಯನಾಡಿನಲ್ಲಿ ತಡ ರಾತ್ರಿಯಿಂದ ಭಾರೀ ಮಳೆ ಉಂಟಾಗಿದ್ದು, ಮೈಸೂರಿನ ಕೆಲವು ಭಾಗಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

ವಯನಾಡಿನಲ್ಲಿ ಸೋಮವಾರ ರಾತ್ರಿಯಿಂದ ಭಾರೀ ಮಳೆ ಆಗುತ್ತಿದ್ದು, ಕಬಿನಿ ನದಿಗೆ ಒಳಹರಿವು ಹೆಚ್ಚಾಗಿದೆ. ವಯನಾಡಿಗೆ ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಇತ್ತ ಕಬಿನಿ ಈಗಾಗಲೇ ಪೂರ್ಣಗೊಂಡಿದ್ದು, ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕಬಿನಿಯಿಂದ ಹೆಚ್ಚು ನೀರು ಹೊರ ಬಿಡಲಾಗುತ್ತಿದ್ದು, ನದಿ ತಟದ ಗ್ರಾಮಗಳಿಗೆ ಮುಳುಗುವ ಭೀತಿ ಹೆಚ್ಚಾಗಿದೆ.

ಕಬಿನಿಯಿಂದ ಈಗಾಗಲೇ 20 ಸಾವಿರ ಕ್ಯೂಸೆಕ್ಸ್‌ ನೀರು ಹೊರಬಿಡಲಾಗುತ್ತಿದ್ದು, ಹೆಚ್ಚುವರಿಯಾಗಿ 20 ಸಾವಿರ ಕ್ಯೂಸೆಕ್ಸ್‌ ನೀರು ಹೊರಬಿಡಲಾಗುವುದು ಎಂದು ಹೇಳಲಾಗಿದೆ.

ನಂಜನಗೂಡಿನ ಕಪಿಲಾ ನದಿಗೆ ಹೆಚ್ಚಿನ ನೀರು ಬಿಡಲಾಗುತ್ತಿದ್ದು, ನಂಜನಗೂಡು, ಮಾದಾಪುರ, ಬಿದರಹಳ್ಳಿ, ನಡಿಗುಂಡ, ಗೊದ್ದನಪುರ, ಹೆಜ್ಜಿಗೆ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದ್ದು, ನದಿ ತಟದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

Tags:
error: Content is protected !!