Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ಹೆದ್ದಾರಿ ತಡೆದು ಉರುಳು ಸೇವೆ ಮಾಡಿ ರೈತರ ಪ್ರತಿಭಟನೆ : ನಂಜನಗೂಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್

ನಂಜನಗೂಡು : ಪ್ರತಿ ಟನ್ ಕಬ್ಬಿಗೆ 3500 ರೂ ಬೆಲೆ ನೀಡುವಂತೆ ಆಗ್ರಹಿಸಿ ಬೆಳಗಾವಿಯ ಗರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ರೈತರ ಅನಿರ್ಧಿಷ್ಟಾವಧಿ ಪ್ರತಿಭಟನೆ ಬೆಂಬಲಿಸಿ ನಂಜನಗೂಡಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಉರುಳು ಸೇವೆ ಮಾಡುವ ಮೂಲಕ ರೈತರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ನಂಜನಗೂಡು ನಗರದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯ ಸಂಗೋಳ್ಳಿ ರಾಯಣ್ಣ ವೃತದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ನೇತೃತ್ವದಲ್ಲಿ ಜಮಾಯಿಸಿದ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಧಿಕ್ಕಾರದ ಘೋಷಣೆಗಳನ್ನು ಕೂಗಿ ಹೆದ್ದಾರಿಯಲ್ಲಿ ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ, ಬಣ್ಣಾರಿ ಅಮ್ಮಾನ್ ಸಕ್ಕರೆ ಕಾರ್ಖಾನೆಗೆ ಹಾಗೂ ರಾಜ್ಯದ ಇನ್ನಿತರ ಕಾರ್ಖಾನೆಗಳಿಗೂ ಪೂರೈಕೆ ಆಗುವ ಪ್ರತಿ ಟನ್ ಕಬ್ಬಿಗೆ ಕಟಾವು ಕೂಲಿ ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳೆ ಬರಿಸಿ ರೈತರ ಖಾತೆಗೆ 3500 ಮುಂಗಡವಾಗಿ ರೈತರ ಖಾತಿಗೆ ಜಮಾ ಮಾಡಬೇಕು. ರೈತರ ಕಬ್ಬಿನ ಬೆಳೆಗೆ ಇಳುವರಿ ಶೇಕಡ 10.25 ಸಕ್ಕರೆ ಇಳುವರಿ ಆಧಾರದ ಮೇಲೆ ಬೆಲೆ ನಿಗದಿ ಆಗುತ್ತಿರುವುದನ್ನು ರೈತ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಇಳುವರಿಯನ್ನು ಕಾರ್ಖಾನೆಗಳು ರೈತರಿಗೆ ಸುಳ್ಳು ಹೇಳುತ್ತಿರುವುದರಿಂದ ರೈತರು ಇಂತಹ ಮೋಸಗಳನ್ನು ಒಪ್ಪುವುದಿಲ್ಲ ಹಾಗಾಗಿ ಕಬ್ಬು ಬೆಳೆಗಾರರ ರಕ್ಷಣೆಗೆ ಮುಖ್ಯಮಂತ್ರಿಗಳು ಹಾಗೂ ಸಕ್ಕರೆ ಸಚಿವರು ರೈತರ ಹಿತವನ್ನು ಕಾಪಾಡಬೇಕು. ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಮಾಡಬೇಕು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಮೈಸೂರು ಜಿಲ್ಲೆಯಲ್ಲಿ ಭತ್ತದ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆಯಬೇಕು. ಈಗಾಗಲೇ ರೈತರು ಕಾಡು ಪ್ರಾಣಿಗಳ ದಾಳಿಯಿಂದ ರೈತರು ಸಾವನ್ನಪ್ಪುತ್ತಿದ್ದಾರೆ. ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:-ಹೆದ್ದಾರಿ ತಡೆದು ಉರುಳು ಸೇವೆ ಮಾಡಿ ರೈತರ ಪ್ರತಿಭಟನೆ : ನಂಜನಗೂಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಟ್ರಾಫಿಕ್ ಜಾಮ್ ಕಂಡು ಬಂದಿದ್ದು, ವಾಹನ ಸವಾರರು ಪರದಾಡಿದರು.

ಪ್ರತಿಭಟನೆಯಲ್ಲಿ ಮಹದೇವ ನಾಯಕ, ಉಪ್ಪನಹಳ್ಳಿ ದೇವರಾಜ್, ಶ್ವೇತಾ, ಸವಿತಾ, ಶೋಭಾ, ಮಂಜುಳಾ, ರವಿ, ಮಂಜು, ನಂಜುಂಡೇಗೌಡ, ಪ್ರಕಾಶ್, ರಂಗಸ್ವಾಮಿ ನಾಯಕ, ಶಂಕರ ನಾಯಕ, ದೊಡ್ಡೇಗೌಡ, ತಿಮ್ಮನಾಯಕ, ಸೋಮಣ್ಣ, ಬೀರಪ್ಪ, ಚಿನ್ನಸ್ವಾಮಿ, ಮಲ್ಲಹಳ್ಳಿ ರವಿ, ಫಯಾಜ್ ರೆಹಮದ್, ಅಬ್ದುಲ್, ಕಳಲೆ ದೇವನಾಯಕ ಸೇರಿದಂತೆ ರೈತರು ಭಾಗವಹಿಸಿದ್ದರು.

Tags:
error: Content is protected !!