Mysore
13
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ನಿವೃತ್ತಿ ಹೊಂದಿದ ಯೋಧ ಸಿದ್ದಲಿಂಗಯ್ಯಗೆ ಬೀಳ್ಕೊಡುಗೆ

Farewell to retired soldier Siddalingaiah

ಮೈಸೂರು : ಭಾರತೀಯ ಸೇನೆಯಲ್ಲಿ ಸುಧೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಮಂಡ್ಯ ಮೂಲದ ಸಿಆರ್‌ಪಿಎಫ್‌ನ ಎಸ್ಐ ಎನ್. ಸಿದ್ದಲಿಂಗಯ್ಯ ಅವರಿಗೆ ಚೆನ್ನೈನ ಪೂನಮಲ್ಲೆನಲ್ಲಿರುವ ಸಿಆರ್‌ಪಿಎಫ್ ಕಮಾಂಡೆಂಟ್ ಕಚೇರಿಯಲ್ಲಿ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು.

ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಚೆಲುವಮ್ಮ-ನಿಂಗಯ್ಯ ದಂಪತಿಯ 3ನೇ ಪುತ್ರ ರಾಗಿ ಜನಿಸಿದ ಇವರು, 1988ರಲ್ಲಿ ಸಿಆರ್ ಪಿಎಫ್ ಗೆ ಆಯ್ಕೆಯಾಗಿ ತರಬೇತಿ ಪಡೆದ ನಂತರ ಶ್ರೀಲಂಕಾ ದಲ್ಲಿರುವ ಭಾರತೀಯ ಶಾಂತಿ ಸೇನೆಯಲ್ಲಿ ವೃತ್ತಿ ಸೇವೆ ಆರಂಭಿಸಿದರು. ಮಣಿಪುರ, ಅಸ್ಸಾಂ, ಛತ್ತೀಸ್ ಘಡ್, ಪಂಜಾಬ್, ನಾಗಲ್ಯಾಂಡ್, ತ್ರಿಪುರ, ಅರುಣಾಚಲ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಸಿಪಾಯಿ, ಹವಲ್ದಾರ್, ಎಎಸ್ಐ, ಎಸ್ಐ ಆಗಿ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಇವರು ಮೈಸೂರಿನ ವಿಜಯನಗರದಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.  ಬೀಳ್ಕೊಡುಗೆ ಸಮಾರಂಭದಲ್ಲಿ ಕಮಾಂಡೆಂಟ್ ರಾದ ಮುಖೇಶ್ ಕುಮಾರ್, ಸಹಾಯಕ ಕಮಾಂಡೆಂಟ್ ಅಲಿನ್ ಆಗಸ್ಟಿನ್, ಇನ್ ಸ್ಪೆಕ್ಟರ್ ಗಳು, ಎಸ್ಐಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಸಿದ್ದಲಿಂಗಯ್ಯ, ದಿನನಿತ್ಯ ಗಡಿಯಲ್ಲಿ ಯುದ್ಧದ ವಾತಾವರಣ, ಬಂದೂಕು- ಗುಂಡುಗಳ ಮೊರೆತ, ಉಗ್ರರ ದಾಳಿ ಹೀಗೆ ಒಂದಿಲ್ಲೊಂದು ಘಟನೆಗಳ ಆತಂಕದಲ್ಲಿ ಇರುತ್ತಿದ್ದ ನಮಗೆ ನಮ್ಮ ಜೀವಕ್ಕಿಂತ ದೇಶ ರಕ್ಷಣೆಯೇ ಮುಖ್ಯವಾಗಿರುತ್ತದೆ. ಕುಟುಂಬ, ಸಂಬಂಧ ಇವುಗಳಿಂದ ದೂರ ಇದ್ದ ನನಗೆ ನೈತಿಕವಾಗಿ ಬೆಂಬಲ ನೀಡುತ್ತಿದ್ದ ಪತ್ನಿ ಶಿಕ್ಷಕಿಯೂ ಆದ ಶಾಂತಮ್ಮ ಅವರ ಸಂಪೂರ್ಣ ಸಹಕಾರ ಇತ್ತು. ಇದರಿಂದಲೇ 37 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಲು ಸಾಧ್ಯವಾಯಿತು. ನನ್ನನ್ನು ಖಾಕಿ ವಸ್ತ್ರದಲ್ಲಿ ನೋಡಬೇಕಿದಿದ್ದ ಅವಿದ್ಯಾವಂತರಾದ ನನ್ನ ತಂದೆ -ತಾಯಿ ಕನಸಾಗಿತ್ತು. ಅವರಿಗೆ ಈ ಸೇವೆಯನ್ನು ಅರ್ಪಿಸುತ್ತೇನೆ. ದೇಶ ಸೇವೆ ಸಲ್ಲಿಸಲು ಧೈರ್ಯ, ಸ್ಥೈರ್ಯ, ಪ್ರಾಮಾಣಿಕತೆ ಅತಿ ಮುಖ್ಯ ಎಂದರು.

Tags:
error: Content is protected !!