Mysore
27
scattered clouds
Light
Dark

ಮೇ.18 ರಂದು ಪ್ರಾಚೀನ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ

ಮೈಸೂರು: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ “ಶಿಕ್ಷಣ ಮತ್ತು ಸಂಶೋಧನೆಗಾಗಿ ವಸ್ತುಸಂಗ್ರಹಾಲಯಗಳು” ಎಂಬ ಶೀರ್ಷಿಕೆಯಡಿಯಲ್ಲಿ ಮೇ.18 ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯ ಆಚರಿಸಲಾಗುತ್ತಿದೆ.

ಇದರ ಅಂಗವಾಗಿ ಅಂದು ಬೆಳಗ್ಗೆ 11 ಗಂಟೆಗೆ ಹುಣಸೂರಿನ ಅಪೂರ್ವ ನಾಣ್ಯ ಮತ್ತು ನೋಟುಗಳ ಸಂಗ್ರಹಕಾರರಾದ ಪಿ.ಕೆ.ಕೇಶವಮೂರ್ತಿ ಅವರಿಂದ “ಪ್ರಾಚೀನ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ”ವನ್ನು ಇಂದಿರಾನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿ ಆಯೋಜಿಲಾಗಿದೆ.

ಕಾರ್ಯಕ್ರಮದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಆಸಕ್ತರುಗಳು ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸುನೀಲ್ ಕುಮಾರ್ ದೂ.ಸಂ: 7829404796 ಅನ್ನು ಸಂಪರ್ಕಿಸುವುದು ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.