Mysore
15
clear sky

Social Media

ಶುಕ್ರವಾರ, 23 ಜನವರಿ 2026
Light
Dark

86 ಕೋಟಿ ವೆಚ್ಚದಲ್ಲಿ ಕಪಿಲ ನದಿಗೆ ತಡೆಗೋಡೆ : ಶಾಸಕ ದರ್ಶನ ದ್ರುವನಾರಾಯಣ್‌ ಮನವಿಗೆ ಸರ್ಕರದ ಭರವಸೆ

ನಂಜನಗೂಡು : 86 ಕೋಟಿ ವೆಚ್ಚದಲ್ಲಿ ಶ್ರೀಕಂಠೇಶ್ವರನ ಸನ್ನಿದಿ ನಂಜನಗೂಡಲ್ಲಿ ಕಪಿಲಾ ನದಿಗೆ ತಡೆಗೋಡೆ ನಿರ್ಮಿಸಲು ಸರ್ಕಾರ ಭರವಸೆ ನೀಡಿದೆ.

ಪಕ್ಕದ ರಾಜ್ಯ ಕೇರಳದಲ್ಲಿ ಭಾರಿ ಮಳೆ ಬಂದಾಗಲೆಲ್ಲ ತುಂಬಿ ಉಕ್ಕೇರುವ ಕಪಿಲೆಯ ಪ್ರವಾಹಕ್ಕೆ ಸಿಲುಕುವ ಶ್ರೀಕಂಠೇಶ್ವರನ ಸನ್ನಿಧಿ ನಂಜನಗೂಡು ಪ್ರವಾಹಕ್ಕೆ ಸಿಲುಕಿ ಕಷ್ಟನಷ್ಠಗಳಿಗೆ ಸಿಲುಕುವದರಿಂದ ಆಗಬಹುದಾದ ದುಷ್ಪರಿಣಾಮಗಳನ್ನು ಸರ್ಕಾಕ್ಕೆ ವಿಧಾನ ಸಭೆಯಲ್ಲಿ ಸುದೀರ್ಘವಾಗಿ ವಿವರಿಸಿದ ಶಾಸಕ ದರ್ಶನ್ ದ್ರುವನಾರಾಯಣರಗೆ 86 ಕೋಟಿ ವೆಚ್ಚದಲ್ಲಿ ತಡೆಗೊಡೆ ನಿರ್ಮಿಸಲಾಗುವದು ಎಂಭ ಭರವಸೆ ನೀಡಲಾಗಿದೆ.

ಕಪಿಲಾ ನದಿಯ ಪ್ರವಾಹಕ್ಕೆ ಸಿಲುಕುವ ಶ್ರೀಕಂಠೇಶ್ವರ ಸನ್ನಿಧಿಯ ಧುಸ್ಥಿತಿಯನ್ನು ವಿಧಾನ ಸಭಾ ಅಧಿವೇಶನದಲ್ಲಿ ದರ್ಶನ ದ್ರುವನಾರಾಯಣ ನೀರಾವರಿ ಸಚಿವರ ಗಮನಕ್ಕೆ ತಂದು ಪರಿಹಾರಬೇಕು ಎಂದು ಕೇಳಿದಾಗ ನೀರಾವರಿ ಸಚಿವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ಗೃಹ ಸಚಿವ ಪರಮೇಶ್ವರ ಉತ್ತರ ನೀಡಿದ್ದು ನಿಮ್ಮ ಅಹವಾಲನ್ನು ಪರಾಮರ್ಷಿಸಿದ ಸರ್ಕಾರ ಶ್ರೀಕಂಠೇಶ್ವರ ಸ್ನಾನಘಟ್ಟ ಸೇರಿದಂತೆ ಪರುಶುರಾಮ ದೇವಾಲಯದ ವರಿಗೆ ಕಪಿಲಾ ನದಿಗೆ 86 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿ ಅಭಿವೃದ್ದಿ ಕಾಮಗಾರಿ ಕೈಗೊಂಡು ಪ್ರವಾಹದ ಹಾವಳಿಯನ್ನು ಸಾಕಷ್ಟು ಕಡಿಮೆ ಮಾಡಲು ಯೋಜನೆ ಸಿಧ್ದಪಡಿಸಿದ್ದು ಶೀಘ್ರದಲ್ಲಿ ಅದನ್ನು ಕಾರ್ಯರೂಪಕ್ಕೆ ತರಲಾವುದು ಎಂದು ತಿಳಿಸಿದ್ದಾರೆ,

Tags:
error: Content is protected !!