ಮೈಸೂರು: ಸಂಡೇ ಸ್ಫೋರ್ಟ್ಸ್ ಕ್ಲಬ್‌ನ ವಾರ್ಷಿಕೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಚೆಸ್ಕಾಂ) ದ ಸಹಭಾಗಿತ್ವದಲ್ಲಿ ಭಾನುವಾರ ನಡೆದ ವಿದ್ಯುತ್ ಸುರಕ್ಷತಾ ಕುರಿತ ಜಾಗೃತಿ ಓಟ ಮ್ಯಾರಥಾನ್‌ನಲ್ಲಿ ನೂರಾರು ಜನ ಭಾಗಿಯಾಗಿದ್ದರು.
ನಗರದ ಓವಲ್ ಮೈದಾನದಲ್ಲಿ ನಡೆದ ಸುರಕ್ಷತಾ ಓಟದಲ್ಲಿ ಸಾವಿರಕ್ಕೂ ಹೆಚ್ಚು ಜನರು ಆಸಕ್ತಿಯಿಂದ ಭಾಗಿಯಾಗಿದರು.
10ಕಿ.ಮೀ ಓಟವು ಓವಲ್ ಮೈದಾನದಿಂದ ಪ್ರಾರಂಭವಾಗಿ ಹುಣಸೂರು ರಸ್ತೆ ಮೂಲಕ ಪ್ರೀಮಿಯರ್ ಸ್ಟೋಡಿಯೊ, ಜೆ.ಸಿ ಕಾಲೇಜು ರಸ್ತೆ, ಬೋಗಾದಿ, ಕುಕ್ಕರಹಳ್ಳಿ ರಸ್ತೆ ದಾಟಿ ರಾಮಸ್ವಾಮಿ ಸರ್ಕಲ್ ಮೂಲಕ ಓವಲ್ ಮೈದಾನ ತಲುಪಿತು. ಇನ್ನೂ 3 ಕಿ.ಮೀ ಓಟದಲ್ಲಿ ಓವಲ್ ಮೈದಾನದಿಂದ ಹುಣಸೂರು ರಸ್ತೆ ಮೂಲಕ ಕುಕ್ಕರಹಳ್ಳಿ ರಸ್ತೆ, ಫೈರ್ ಬ್ರಿ ಗೇಡ್ ರಸ್ತೆ, ರಾಮಸ್ವಾಮಿ ರಸ್ತೆ ಮೂಲಕ ಮೈದಾನ ತಲುಪಿತು.
ಮ್ಯಾರಥಾನ್‌ಗೆ ಚಾಲನೆ ನೀಡಿ ಶುಭಕೋರಿದ ಶಾಸಕ ಹಾಗೂ ಚೆಸ್ಕಾಂ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ದೇಗೌಡ ಸೆಸ್ಕ್ ಸುರಕ್ಷತೆಗಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಲ್ಲಿ ವಿದ್ಯುತ್ ಅವಘಡದ ಪರಿಣಾಮ ಕುರಿತು ಮುನ್ನೆಚ್ಚರಿಕೆ ಇರಬೇಕು. ಯಾವುದೇ ರೀತಿಯ ಅವಘಡವಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶೀಲಾ.ಜಿ ಸೇರಿದಂತೆ ಚೆಸ್ಕಾಂ ಸಿಬ್ಬಂದಿ ಹಾಗೂ ಇತರರು ಪಾಲ್ಗೊಂಡಿದ್ದರು.