ಮೈಸೂರು: ಅರಣ್ಯ ಇಲಾಖೆಯಲ್ಲಿ ಸಲ್ಲಿಸಿದ್ದ ಗಣನೀಯ ಸೇವೆಯನ್ನು ಗುರುತಿಸಿ ದಸರಾ ಆನೆ ಅಭಿಮನ್ಯುವಿನ ಮಾವುತ ಜೆ.ಎಸ್.ವಸಂತ ಅವರಿಗೆ 2022-23ನೇ ಸಾಲಿನ ಮುಖ್ಯಮಂತ್ರಿ ಪದಕ ದೊರೆತಿದೆ.
ಮಾವುತ ಜೆ.ಜೆ ವಸಂತ್ ಅವರು ಸುಮಾರು ವರ್ಷಗಳಿಂದ ಆನೆ ಅಭಿಮನ್ಯುವಿನ ಮಾವುತರಾಗಿದ್ದಾರೆ. ಕ್ಯಾಪ್ಟನ್ ಅಭಿಮನ್ಯು ಸತತ ನಾಲ್ಕು ಬಾರಿ ಅಂಬಾತಿ ಹೊತ್ತಿದ್ದು, ಇದೀಗೆ ಐದನೇ ಬಾರಿ ಅಂಬಾರಿ ಹೊರಲು ಸಿದ್ದನಾಗಿದ್ದಾನೆ.
ಜೊತೆಗೆ ಮೈಸೂರು ವೃತ್ತ ವ್ಯಾಪ್ತಿಯ ನಾಲ್ವರು ಅಧಿಕಾರಿ ಹಾಗೂ ಸಿಬ್ಬಂದಿಗೂ ಮುಖ್ಯಮಂತ್ರಿ ಪದಕ ದೊರೆತಿದೆ.
ಅರಣ್ಯ ಸಂರಕ್ಷಣೆ ವಿಭಾಗದಲ್ಲಿ ಉಪ ವಲಯ ಅರಣ್ಯಾಧಿಕಾರಿ ಎನ್.ಶ್ರೀನಿವಾಸ್ ಹಾಗೂ ಗಸ್ತು ಅರಣ್ಯಪಾಲಕ ಎ.ಎಂ ಮಂಜುನಾಥ್. ವನ್ಯಜೀವಿ ಸಂರಕ್ಷಣೆ ವಿಭಾಗದಲ್ಲಿ ಉಪ ವಲಯ ಅರಣ್ಯಾಧಿಕಾರಿ ಎಸ್.ಎಂ ಮಂಜುನಾಥ್ ಹಾಗೂ ಜೆ.ಎಸ್ ವಸಂತ ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.