ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಹೃದ್ರೋಗ ಸಂಸ್ಥೆಯಾದ ಶ್ರೀಜಯದೇವ ಹೃದ್ರೋಗ ಸಂಸ್ಥೆ ನೂತನ ನಿರ್ದೇಶಕರಾಗಿ ಡಾ. ದಿನೇಶ್ ಅವರನ್ನು ನೇಮಕ ಮಾಡಲಾಗಿದೆ.
ಈ ತನಕ ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ದಿನೇಶ್ ಅವರನ್ನು ಇದೀಗ ಜಯದೇವ ಹೃದ್ರೋಗ ಸಂಸ್ಥೆಯ ಹೊಸ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ, ಈ ಸಂಬಂದ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಕಳೆದ ವಾರವಷ್ಟೆ ನೂತನ ನಿರ್ದೇಶಕರ ಆಯ್ಕೆ ಸಂಬಂಧ ಸಂದರ್ಶನ ನಡೆಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಈ ಸಂದರ್ಶನ ನಡೆಸಿದ್ದರು. ಆದರೆ ನಿವೃತ್ತ ಪ್ರಾಧ್ಯಾಪಕರೊಬ್ಬರು ಕೋರ್ಟ್ ಮೊರೆ ಹೊಕ್ಕಿದ್ದ ಕಾರಣ ಫಲಿತಾಂಶ ಪ್ರಕಟಿಸಿರಲಿಲ್ಲ. ಇದೀಗ ಕೋರ್ಟ್ ಕೇಳಿದ್ದ ಮಾಹಿತಿಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಆಯ್ಕೆಗೊಂಡ ಅಭ್ಯರ್ಥಿ ಹೆಸರು ಪ್ರಕಟಿಸಲು ಅನುಮತಿ ನೀಡಿತು.





