Mysore
22
overcast clouds
Light
Dark

ಕುಡಿಯುವ ನೀರಿನ ಶುಚಿತ್ವಕ್ಕೂ ಗಮನ ಹರಿಸಿ: ಜಿಪಂ ಸಿಇಒ ಗಾಯತ್ರಿ

ಮೈಸೂರು : ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ಕ್ರಮಹಿಸುವ ಜತೆಗೆ ಕುಡಿಯುವ ನೀರಿನ ಶುಚಿತ್ವದ ಬಗ್ಗೆ ಜಾಗರೂಕರಾಗಿರಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಬೋರ್ ವೆಲ್ ಗಳು ಇರುವ ಕಡೆ ಕೊಳಚೆ ನೀರು ಹಾಗೂ ಕಸ ತೆರವುಗೊಳಿಸುವುದು. ಕುಡಿಯುವ ನೀರಿನಿಂದ ಸಮಸ್ಯೆಗಳು ಉದ್ಭವಿಸುವ ಮುನ್ನವೇ ಎಲ್ಲಾ ಗ್ರಾಮಗಳಲ್ಲಿ ಪರಿಶೀಲಿಸಿ ಅಗತ್ಯ ಕ್ರಮವಹಿಸಿ ಎಂದು ಹೇಳಿದರು.

ಅಗತ್ಯ ಕ್ರಮವಹಿಸುವ ಸಂಬಂಧ ಗ್ರಾ.ಪಂ.ನ ಎಲ್ಲಾ ಸಿಬ್ಬಂದಿ/ನೌಕರರು ಹಾಗೂ ಆಶಾ ಕಾರ್ಯಕರ್ತೆಯರು, ಹಾಗೂ ಸಖಿ ರವರನ್ನು ಬಳಸಿಕೊಳ್ಳುವುದು. ಜೆ.ಜೆ.ಎಂ. ಪೈಪ್ ಲೈನ್ ಹಾಗೂ ಇತರೆ ನೀರಿನ ಪೈಪ್ಗಳನ್ನು ಪರಿಶೀಲಿಸಿ ದುರಸ್ತಿಯ ಅಗತ್ಯವಿದ್ದಲ್ಲಿ ಬದಲಾಯಿಸಲು ಅಥವಾ ದುರಸ್ತಿಗೊಳಿಸಲು ಕ್ರಮವಹಿಸುವುದು. ನಿಯಮಿತವಾಗಿ ನೀರಿನ ಪರೀಕ್ಷೆಗಳನ್ನು ನಡೆಸಿ ಶುದ್ಧತೆಯ ಬಗ್ಗೆ ಖಚಿತಪಡಿಸಿಕೊಳ್ಳುವುದು. ಡೆಂಗ್ಯೂ ಹಾಗೂ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಸ್ತೆ ಚರಂಡಿ ಹಾಗೂ ಇತರೆಡೆಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ ಹಾಗೂ ಗುಣಮಟ್ಟದ ಅರಿವು ಮೂಡಿಸಲು ಹಾಗೂ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಗ್ರಾಮಸ್ಥರುಗಳಿಗೆ ಜಾಗೃತಿ ಮೂಡಿಸಲು ಐಇಸಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು. ನೀರಿನ ಸುರಕ್ಷಿತ ಸರಬರಾಜಿಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗದಂತೆ ನೀರು ಪೂರೈಸಲು ಕ್ರಮವಹಿಸುವುದು ಹಾಗೂ ಅವಶ್ಯವಿರುವ ಕಡೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸುವುದು. ಕಾಲ ಕಾಲಕ್ಕೆ ಎಫ್ ಟಿಕೆ ಟೆಸ್ಟ್ (FTK) ಹಾಗೂ ಬ್ಯಾಕ್ಟೀರಿಯಾ ಟೆಸ್ಟ್ ಕೈಗೊಳ್ಳುವುದು. ಕಾರ್ಯನಿರ್ವಾಹಕ ಅಧಿಕಾರಿಗಳು ಕುಡಿಯುವ ನೀರಿನ ಸಮರ್ಪಕ ಪೂರೈಕೆ ಹಾಗೂ ಬಳಕೆಗಾಗಿ ಮೇಲುಸ್ತುವಾರಿ ವಹಿಸುವಂತೆ ಸೂಚಿಸಿದರು.

ನೀರಿನ ಸಮಸ್ಯೆ ನಿವಾರಣೆಗೆ ಕಾರ್ಯನಿರ್ವಾಹಕ ಅಧಿಕಾರಿ, ಸ.ಕಾ.ಪಾ.ಅಭಿಯಂತರರು, ಗ್ರಾ.ಕು.ನೀ&ನೈ ಉಪ ವಿಭಾಗ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು ತಂಡಗಳನ್ನಾಗಿ ರಚಿಸಿಕೊಂಡು ಕಾರ್ಯ ನಿರ್ವಹಿಸುವುದು. ಪಂ.ಅ.ಅ. ಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಮುನ್ನ ಸಂಬಂಧಿಸಿದ ತಾಲ್ಲೂಕು ಕಛೇರಿಗಳಲ್ಲಿ ನೋಂದಾಯಿಸುವುದು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿರುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ನಂತರ ಸರಬರಾಜು ಮಾಡಲು ಕ್ರಮವಹಿಸುವುದು. ನೀರಿನ ಶೇಖರಣಾ ಘಟಕ ಹಾಗೂ ಸರಬರಾಜು ಘಟಕಗಳ ಶುದ್ಧತೆ ಹಾಗೂ ಗುಣಮಟ್ಟವನ್ನು ಪರೀಕ್ಷಿಸಿಕೊಂಡು ಸಂಪೂರ್ಣ ವರದಿ ನೀಡುವಂತೆ ಸೂಚಿಸಿದರು.

ಕುಡಿಯುವ ನೀರಿನ ಕೊರತೆ ಕಂಡುಬಂದಲ್ಲಿ ಮಾನ್ಯ ಜಿಲ್ಲಾಧಿಕಾರಿಯವರು ಈಗಾಗಲೇ ನಿರ್ದೇಶನ ನೀಡಿರುವಂತೆ ಟ್ಯಾಂಕರ್ ಮ್ಯಾನೇಜ್ ಮೆಂಟ್ ಮೊಬೈಲ್ ಆಪ್ ಬಳಸಿಕೊಂಡು ಟ್ಯಾಂಕರ್ ಸ್ವಚ್ಛವಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಆಡಳಿತ) ಡಾ.ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ರಂಜಿತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕುಮಾರಸ್ವಾಮಿ, ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಗ್ರಾ.ಕು.ನೀ & ನೈ ಉಪ-ವಿಭಾಗಗಳ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.