ಮೈಸೂರು: ಅಯ್ಯಪ್ಪ ಸ್ವಾಮಿ ದೇವಸ್ಥಾನ ಪಕ್ಕದ ಕೇರಳ ರಾಜ್ಯದಲ್ಲಿ ಇದ್ದರೂ ಅಯ್ಯಪ್ಪನಿಗೆ ಹೆಚ್ಚಿನ ಭಕ್ತರು ಇರುವುದು ನಮ್ಮ ಕರ್ನಾಟಕದಲ್ಲಿಯೇ ಪ್ರತಿ ವರ್ಷವು ಅಯ್ಯಪ್ಪನನ್ನು ನೋಡುವುದಕ್ಕೆ ರಾಜ್ಯದಿಂದ ಕಾರುಗಳು, ಬಸ್‌ಗಳಲ್ಲಿ ಹೋಗುತ್ತಾರೆ. ಆದರೆ ಕೆಲ ಭಕ್ತರು ಅಯ್ಯಪ್ಪನನ್ನು ನೋಡಲು ವಿಶೇಷವಾಗಿ ತೆರಳುತ್ತಿದ್ದಾರೆ.
ತಲೆಯ ಮೇಲೆ ಇರುಮುಡಿ, ಕಾಲಿಗೆ ಕಾಲು ಚೀಲವನ್ನು ಹಾಕಿಕೊಂಡು ನಡೆದುಕೊಂಡು ಹೋಗುತ್ತಿರುವ 4 ಜನ ಭಕ್ತರು ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ವಿಚಾರ ಮಾಡಿದ್ರೆ ದೂರದ ಅಯ್ಯಪ್ಪನನ್ನು ನೋಡುವುದಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಎನ್ನುವ ಉತ್ತರ.
ದಾವಣಗೆರೆಯ ಲಕ್ಷ್ಮಣ್ ರಾವ್, ಜೀವನ್ ಕುಮಾರ್, ರಘು, ನಾಗರಾಜು ಅವರು ಅಯ್ಯಪ್ಪನನ್ನು ಕಾಲ್ನಡಿಗೆಯಲ್ಲಿ ನೋಡಬೇಕು ಎನ್ನುವ ಆಶಯದೊಂದಿಗೆ ದೂರಾದ ದಾವಣಗೆರೆಯಿಂದ ತಲೆಯ ಮೇಲೆ ಇರುಮುಡಿ ಎತ್ತುಕೊಂಡು ತಮ್ಮ ಊರನ್ನು ಈ ತಿಂಗಳ.15ರಂದು ಹೊರಟಿದ್ದು, 8 ದಿನಗಳಲ್ಲಿ 320 ಕಿ.ಮೀ ಕ್ರಮಿಸಿ ಇಂದು ಮೈಸೂರಿಗೆ ಅಗಮಿಸಿದ್ದಾರೆ.
ಇವರ ಪಾದಾಯಾತ್ರೆಯಲ್ಲಿ ಪ್ರತಿ ದಿನ 40 ಕಿ.ಮೀ ಗೂ ಹೆಚ್ಚು ನಡೆಯುವ ಪಾದಯಾತ್ರಿಗಳು ಸಂಜೆಯಾಗುತ್ತಲೇ ಅಲ್ಲಿ ಸಿಕ್ಕ ಜಾಗದಲ್ಲಿಯೇ ಮಲಗಿಕೊಂಡು ನಂತರ ಬೆಳಗ್ಗೆ ಮತ್ತೆ ತಮ್ಮ ಪಾದಯಾತ್ರೆಯನ್ನು ಮುಂದುವರೆಸುತ್ತಾರೆ. ಒಟ್ಟು ಶಬರಿಮಲೆಗೆ 865 ಕಿ.ಮೀ ದೂರವಿದ್ದು ಇನ್ನೂ 15 ದಿನಗಳಲ್ಲಿ ಸನ್ನಿಧಿಗೆ ತಲುಪಿ ಅಯ್ಯಪ್ಪನ ದರ್ಶನ ಮಾಡುವ ನಿರೀಕ್ಷೆ ಇದೆ ಎನ್ನುತ್ತಾರೆ ಪಾದಯಾತ್ರಿಗಳು.
ಇನ್ನು ಅಯ್ಯಪ್ಪ ಭಕ್ತರು ಪಾದಯಾತ್ರೆ ಮಾಡುವ ಸಮಯದಲ್ಲಿ ಮಾರ್ಗ ಮಧ್ಯೆ ಅನೇಕ ಜನರು ಗೌರವದಿಂದ ಅವರಿಗೆ ಹಣ್ಣು ಹಂಪಲುಗಳು, ಬಿಸ್ಕೆಟ್, ಚಾಕಲೇಟ್‌ಗಳನ್ನು ನೀಡಿ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡು ಅವರನ್ನು ಬೀಳ್ಕೊಡುಗೆ ನೀಡುತ್ತಿದ್ದ ಪರಿ ವಿಶೇಷವಾಗಿತ್ತು.
ಇನ್ನು ಈ 4 ಜನ ಪಾದಯಾತ್ರೆಗಳ ತಂಡದಲ್ಲಿ ಲಕ್ಷ್ಮಣ್ ರಾವ್ ಅವರಿಗೆ 70 ವರ್ಷ ದಾಟಿದ್ದರು. ಯಾವುದೇ ಯುವಕರಿಗಿಂತ ನಾವೇನು ಕಮ್ಮಿ ಇಲ್ಲ ಎನ್ನುವಂತೆ ಹಜ್ಜೆಹಾಕಿಕೊಂಡು ಹೋಗುತ್ತಿದ್ದದ್ದು ವಿಶೇಷವೇ ಸರಿ.





