Mysore
28
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಕುಕ್ಕರಹಳ್ಳಿ ಕೆರೆಗೆ ಸೇರುತ್ತಿರುವ ತ್ಯಾಜ್ಯ ಮಲಿನ ನೀರು ತಡೆಗಟ್ಟುವಂತೆ ಒತ್ತಾಯ

ಮೈಸೂರು : ಕುಕ್ಕರಹಳ್ಳಿ ಕೆರೆಗೆ ತ್ಯಾಜ್ಯ ಮಲಿನ ನೀರು ಸೇರುತ್ತಿರುವುದನ್ನು ತಡೆಗಟ್ಟುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ಘಟಕ, ಮೈಸೂರು ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದೆ.

ಮೈಸೂರಿನ ಗ್ರಾಹಕ ಪರಿಷತ್ ಮನವಿ ಮೇರೆಗೆ ೨೦೨೫ರ ಏ.೧೯ರಂದು ಕುಕ್ಕರಹಳ್ಳಿ ಕೆರೆಗೆ ತೆರಳಿ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಮೈಸೂರು-ಹುಣಸೂರು ರಸ್ತೆಯ ಪಡುವಾರಹಳ್ಳಿ ಕಡೆಯಿಂದ ಕೆರೆಗೆ ಸೇರುವ ಮಲಿನ ನೀರು, ರಂಗಾಯಣ ಕಡೆಯ ಕೆರೆ ನೀರು, ಯುಜಿಸಿ ಅಕಾಡೆಮಿ ತರಬೇತಿ ಸಂಸ್ಥೆ ಭಾಗದಲ್ಲಿ ಪ್ರತ್ಯೇಕವಾಗಿ ಕೆರೆ ನೀರು ಸಂಗ್ರಹಿಸಿ ಪರೀಕ್ಷಿಸಿದಾಗ ‘ಡಿ‌ʼ ವರ್ಗಿಕರಣ ಎಂದು ನಮೂದಾಗಿದೆ. ಬೋಟಿಂಗ್ ಪಾಯಿಂಟ್ ಹಾಗೂ ಪೂರ್ಣಯ್ಯ ನಾಲೆ ಸೇರುವ ಜಾಗದಲ್ಲಿ(ಪಂಪ್‌ಹೌಸ್ ಬಳಿ) ಕೆರೆ ನೀರು ಸಂಗ್ರಹಿಸಿ ಪರೀಕ್ಷಿಸಿದಾಗ ‘ಸಿʼ ವರ್ಗಿಕರಣ ಎಂದು ನಮೂದಾಗಿದೆ ಎಂದು ಮಾಲಿನ್ಯ ಮಂಡಳಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ನಿಸರ್ಗದಲ್ಲಿ ದೊರೆಯುವ ನೀರನ್ನು ಸಂಗ್ರಹಿಸಿ ಬಳಕೆಗೆ ಯೋಗ್ಯವೇ ಎಂದು ವರ್ಗೀಕರಿಸಿದಾಗ, ಸಾಂಪ್ರದಾಯಿಕವಾಗಿ ಸಂಸ್ಕರಿಸದೆ ಸೋಂಕು ನಿವಾರಿಸಿದ ನಂತರ ಕುಡಿಯುವ ನೀರಿನ ಮೂಲವನ್ನಾಗಿ (‘ಎʼ ವರ್ಗಿಕರಣ) ಬಳಸವುದು. ‘ಬಿʼ ವರ್ಗೀಕರಣ ಎಂದಿದ್ದರೆ ನೀರನ್ನು ವ್ಯವಸ್ಥಿತವಾಗಿ ಸ್ನಾನಕ್ಕೆ ಉಪಯೋಗಿಸುವುದು(‘ಬಿ ವರ್ಗಿಕರಣ). ನೀರನ್ನು ಸಂಸ್ಕರಿಸಿ ಹಾಗೂ ಸೋಂಕು ನಿವಾರಿಸಿದ ನಂತರ(ಸಿ ವರ್ಗಿಕರಣ) ಕುಡಿಯುವ ನೀರಿನ ಮೂಲವನ್ನಾಗಿ ಬಳಸಬಹುದು. ನೀರನ್ನು ವರ್ಗೀಕರಿಸಿದಾಗ ‘ಡಿʼ ವರ್ಗಿಕರಣ ಎಂದು ನಮೂದಾದರೆ ಮೀನುಗಾರಿಕೆ ಮತ್ತು ವನ್ಯಜೀವಿಗಳ ಬಳಕೆಗೆ ಯೋಗ್ಯ. ನೀರನ್ನು ವರ್ಗೀಕಸಿದಾಗ ‘ಇ ವರ್ಗೀಕರಣ ಎಂದು ನಮೂದಾದರೆ ನಿಯಂತ್ರಿತ ವಿಲೇವಾರಿ, ಕೈಗಾರಿಕಾ ಶೀತಲೀಕರಣ ಹಾಗೂ ವ್ಯವಸ್ಥಾಯಕ್ಕೆ ಉಪಯೋಗಸುವ ನೀರಿನ ಮೂಲವನ್ನಾಗಿ ಬಳಕೆ ಮಾಡಬಹುದು.

ಈ ವಿಶ್ಲೇಷಣಾ ವರದಿ ಅನ್ವಯ, ವಿವಿಧೆಡೆಯಿಂದ ತಾಜ್ಯ ಮಲಿನ ನೀರು ಕೆರೆಗೆ ಸೇರುತ್ತಿರುವುದರಿಂದ ಕುಕ್ಕರಹಳ್ಳಿ ಕೆರೆಯ ನೀರಿನ ಗುಣಮಟ್ಟದ ಮಾದರಿಯನ್ನು ವಿಶ್ಲೇಷಣೆ ಮಾಡಿದಾಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನೀರಿನ ವರ್ಗೀಕರಣದನ್ವಯ ಕೆಲವೊಮ್ಮೆ ‘ಡಿ ಮತ್ತು ‘ಸಿ ನಲ್ಲಿ ವರ್ಗೀಕರಿಸಲಾಗಿದೆ. ಕಲುಷಿತ ನೀರು ಕೆರೆಗೆ ಸೇರುವುದರಿಂದ ಕೆರೆ ನೀರಿನ ಗುಣಮಟ್ಟವು ದಿನೇದಿನೆ ಕುಂದುತ್ತಿರುವುದರಿಂದ ತ್ಯಾಜ್ಯ ಮಲಿನ ನೀರು ಕೆರೆಗೆ ಸೇರದಂತೆ ಸೂಕ್ತ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

ಕುಕ್ಕರಹಳ್ಳಿ ಕೆರೆಗೆ ತ್ಯಾಜ್ಯ ನೀರು ಸೇರಿ ಮಲಿನವಾಗುವ ಕುರಿತು ಪರೀಕ್ಷೆಗೆ ಎಂಜಿಪಿ ೨೦೨೫ರ ಏ.೧೫ರಂದು ಒತ್ತಾಯಿಸಿತ್ತು. ಕ್ರಮೇಣ ಏ.೧೬ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೆರೆ ನೀರಿ ಮಾದರಿ ಸಂಗ್ರಹ. ಏ.೧೯ರಂದು ಕುಕ್ಕರಹಳ್ಳಿ ಕೆರೆ ಮಲಿನ ನೀರು ತಡೆಗಟ್ಟುವಂತೆ ವಿಶ್ಲೇಷಣಾ ವರದಿಯನ್ನು ಪಾಲಿಕೆ ಆಯುಕ್ತರಿಗೆ ಸಲ್ಲಿಸಲಾಗಿತ್ತು.

Tags:
error: Content is protected !!