ಬೆಟ್ಟದಪುರ : ಪಿರಿಯಪಟ್ಟಣ ತಾಲೂಕಿನ ಬೆಟ್ಟದಪುರದ ಬಸವೇಶ್ವರ ಕಾಲೋನಿ ನಿವಾಸಿ ಸುಬ್ರಹ್ಮಣ್ಯ(40) ಸಾಲಬಾಧೆಯಿಂದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಲೋನಿಯಲ್ಲಿ ಹೇರ್ ಸಲೂನ್ ಇಟ್ಟುಕೊಂಡು ಜೀವನ ನಿರ್ವಹಿಸುತ್ತಿದ್ದ ಅವರು ಸಲೂನ್ ಪ್ರಾರಂಭಿಸಲು ವಿವಿಧ ಸಂಘಗಳಿಂದ ಹಾಗೂ ಸಾರ್ವಜನಿಕರಿಂದ ಕೈಸಾಲ ಮಾಡಿದ್ದರು. ಸರಿಯಾದ ವ್ಯವಹಾರ ನಡೆಯದ ಕಾರಣ ಹಾಗೂ ಸಾಲಬಾಧೆ ತಾಳಲಾರದೆ ಅಂಗಡಿಯಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅವರ ತಾಯಿ ನೀಲಮ್ಮ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.