ಮೈಸೂರು : ಒಂದೇ ಕುಟುಂಬದ ನಾಲ್ವರ ಶವ ಪತ್ತೆ ಆಗಿರುವಂತಹ ಘಟನೆ ಮೈಸೂರಿನ ಚಾಮುಂಡಿಪುರಂನ ಮನೆಯೊಂದರಲ್ಲಿ ನಡೆದಿದೆ.
ಮಹದೇವಸ್ವಾಮಿ, ಅನಿತಾ ದಂಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಶವಪತ್ತೆಯಾಗಿದೆ. ದೊಡ್ಡ ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನಿತಾ ಮೃತದೇಹ ಕುರ್ಚಿ ಮೇಲೆ, ಚಿಕ್ಕ ಮಗಳು ಕೊಠಡಿಯಲ್ಲಿ ಮತ್ತು ಮಹದೇವಸ್ವಾಮಿ ಶವ ಹಾಲ್‌ನಲ್ಲಿ ಪತ್ತೆಯಾಗಿದೆ. ಮೃತ ಮಹದೇವಸ್ವಾಮಿ ಬಂಡಿಪಾಳ್ಯದಲ್ಲಿ ಮಳಿಗೆ ಹೊಂದಿದ್ದರು.
ಸದ್ಯ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತಾಗಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.