ಮೈಸೂರು : ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ಚಾಮರಾಜನಗರದ ಹೆಗ್ಗವಾಡಿ ಗ್ರಾಮದಲ್ಲಿ ಮತದಾನ ಮಾಡಿದರು.
ಇದಕ್ಕೂ ಮುನ್ನ ಅವರು ತಮ್ಮ ಸೋದರ ಧೀರನ್ ಜೊತೆ ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ತಮ್ಮ ತಂದೆ ದಿವಂಗತ ಧ್ರುವನಾರಾಯಣ್ ಹಾಗೂ ತಾಯಿ ದಿವಂಗತ ವೀಣಾ ಧ್ರುವನಾರಾಯಣ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ನಂತರ ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 65 ರಲ್ಲಿ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ .ಎಸ್.ರೇವಣ್ಣ, ಅಜಯ್ ಶಂಭು, ಗ್ರಾ.ಪಂ. ಸದ್ಯಸರಾದ ಆರ್.ಕೆಂಪರಾಜ್, ನಾಗರಾಜು, ಕೌಶಿಕ್, ಸತೀಶ್, ಮಹೇಶ್, ಮಹದೇವಸ್ವಾಮಿ, ಮನು, ಮಧುಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.