ಎಚ್.ಡಿ.ಕೋಟೆ: 20 ಅಡಿ ಆಳಕ್ಕೆ ಬಿದ್ದ ಹಸುವನ್ನು ಕ್ರೇನ್ ಮೂಲಕ ರಕ್ಷಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಬಳಿ ನೂತನ ಸೇತುವೆ ನಿರ್ಮಾಣಕ್ಕೆಂದು 20 ಅಡಿ ಹಳ್ಳ ತೋಡಲಾಗಿತ್ತು.
ಅಲ್ಲಿಗೆ ಮೇಯಲು ಹೋಗಿದ್ದ ನಾಲ್ಕು ತಿಂಗಳ ಗರ್ಭಿಣಿ ಹಸು ಹಳ್ಳಕ್ಕೆ ಬಿದ್ದಿತ್ತು. ಬಿದರಹಳ್ಳಿ ಗ್ರಾಮದ ಶಿವಲಿಂಗನಾಯಕ ಎಂಬುವವರ ಹಸು ಇದಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಕೇನ್ ತರಿಸಿಕೊಂಡು ಹಸುವನ್ನು ಮೇಲೆತ್ತಿದ್ದಾರೆ.
ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿದ ಸ್ಥಳೀಯರು ಹಸುವನ್ನು ಮೇಲಕ್ಕೆತ್ತಿ ಜೀವ ಉಳಿಸಿದ್ದಾರೆ. ಸದ್ಯ ಹಸು ಪ್ರಾಣಾಪಾಯದಿಂದ ಪಾರಾಗಿದ್ದು, ರೈತ ಶಿವಲಿಂಗನಾಯಕ ಕಾರ್ಯಾಚರಣೆ ನಡೆಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.





