Mysore
28
overcast clouds

Social Media

ಬುಧವಾರ, 25 ಜೂನ್ 2025
Light
Dark

ಹಾರೋಹಳ್ಳಿಯಲ್ಲಿ ದಕ್ಷಿಣದ ಬುದ್ದಗಯ ಸ್ಮಾರಕ ನಿರ್ಮಾಣ : ಪುರುಷೋತ್ತಮ್‌

ಮೈಸೂರು : ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಗೊಂಡಿರುವ ಬಾಲರಾಮ ಶಿಲೆ ಸಿಕ್ಕ ಸ್ಥಳವನ್ನು ದಕ್ಷಿಣದ ಅಯೋಧ್ಯೆ ಬದಲಿಗೆ ದಕ್ಷಿಣದ ಬುದ್ದಗಯ ಮಾಡಲು ಪ್ರಗತಿಪರರ ಒಕ್ಕೂಟ ಚಿಂತನೆ ನಡೆಸಿದೆ.

ಹೌದು.. ತಾಲ್ಲೂಕಿನ ಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮದಲ್ಲಿ ಬಾಲರಾಮನ ಶಿಲೆ ಸಿಕ್ಕಿರುವುದು. ಈ ಜಾಗದಲ್ಲಿ ಬುಧವಾರ (ಜೂ.11) ಬೆಳಿಗ್ಗೆ 11ಕ್ಕೆ 2569ನೇ ಬುದ್ಧ ಪೂರ್ಣಿಮೆ ಅಂಗವಾಗಿ ದಕ್ಷಿಣ ಭಾರತದ ಬುದ್ಧ ಗಯಾ ಸ್ಮಾರಕ ನಿರ್ಮಾಣಕ್ಕಾಗಿ ಧಮ್ಮ ಸಂಕಲ್ಪ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ಈ ಭೂಮಿ ಮೇಲಿನ ಮನುಷ್ಯರೂ ಒಳಗೊಂಡಂತೆ ಎಲ್ಲ ಜೀವಿಗಳ ಸುಖ, ಶಾಂತಿ, ನೆಮ್ಮದಿಯನ್ನು ಬೌದ್ಧ ಪರಂಪರೆ ಬಯಸುತ್ತದೆ. ಇಂತಹ ಮಾನವೀಯತೆ, ಸಮಾನತೆಯ ಆಶಯಗಳ ಬೌದ್ಧ ಧರ್ಮವನ್ನು ಉಳಿಸಿಕೊಳ್ಳಲು ಮೈಸೂರು ದಕ್ಷಿಣ ಭಾಗದಲ್ಲಿ ಬುದ್ಧ ಗಯಾ ಸ್ಮಾರಕ ಸ್ಥಾಪಿಸಲು ತೀರ್ಮಾನ ಮಾಡಲಾಗುತ್ತಿದೆ.

ಈ ಸ್ಮಾರಕ ನಿರ್ಮಾಣಕ್ಕಾಗಿ ಗ್ರಾಮದ ದಲಿತ ಮುಖಂಡರಾದ ಜಯಮ್ಮ ಹಾಗೂ ಅವರ ಕುಟುಂಬದವರು ಸ್ವ-ಇಚ್ಛೆಯಿಂದ ತಮಗೆ ಸೇರಿದ ಭೂಮಿಯನ್ನು ದಾನವಾಗಿ ನೀಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಪ್ರಗತಿಪರರು, ಚಿಂತಕರು ಭಾಗಿಯಾಗಿತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು.

ಸದ್ಯ ಉತ್ತರ ಭಾರತದಲ್ಲಿರುವ ಬುದ್ಧ ಗಯಾವನ್ನು ಎಲ್ಲ ಮನುವಾದಿಗಳು ಆಕ್ರಮಿಸಿಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ಆ ಭಾಗದಲ್ಲಿ ದಕ್ಷಿಣ ಅಯೋಧ್ಯೆ ನಿರ್ಮಾಣಕ್ಕೆ ಎಲ್ಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಅಡ್ಡಿ ಪಡಿಸಿವೆ. ಜಮೀನು ನೀಡುತ್ತಿದ್ದಾರೆಂದು ಹೇಳಲಾಗಿದ್ದ ಕುಟುಂಬವನ್ನು ಕತ್ತಲೆಯಲ್ಲಿಟ್ಟು ಆ ಕೆಲಸ ಮಾಡಲಾಗುತ್ತಿತ್ತು. ಹೀಗಾಗಿ ವಿರೋಧಿಸಲಾಯಿತು ಎಂದು ಹೇಳಿದರು.

ದಲಿತ ಮುಖಂಡರಾದ ಚೋರನಹಳ್ಳಿ ಶಿವಣ್ಣ, ತಾಪಂ ಮಾಜಿ ಸದಸ್ಯ ಎಚ್.ಆರ್.ಸುರೇಶ್‌ಕುಮಾರ್, ಹರಿಹರ ಆನಂದಸ್ವಾಮಿ, ನಂಜುಂಡಸ್ವಾಮಿ, ಮಹದೇವು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Tags:
error: Content is protected !!