Mysore
19
clear sky

Social Media

ಮಂಗಳವಾರ, 20 ಜನವರಿ 2026
Light
Dark

ಕಾರುಗಳ ನಡುವೆ ಡಿಕ್ಕಿ : ಓರ್ವ ಸಾವು, 7 ಮಂದಿಗೆ ಗಾಯ

ತಿ.ನರಸೀಪುರ : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಮೈಸೂರು-ತಿ.ನರಸೀಪುರ ಮುಖ್ಯ ರಸ್ತೆಯ ಎಂ.ಸಿ.ಹುಂಡಿ ಗ್ರಾಮದ ಬಳಿ ನಡೆದಿದೆ.
ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮದ ರವಿಕುಮಾರ್ (೬೫) ಮೃತಪಟ್ಟವರು.
ಮೃತ ರವಿಕುಮಾರ್ ಅವರ ಸಹೋದರಿ ಶಾರದಮ್ಮ ಮತ್ತು ಪತ್ನಿ ಸವಿತಾ ಸೇರಿದಂತೆ ಗಾಯಗೊಂಡಿರುವ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರಳು ಗುತ್ತಿಗೆದಾರ ಕೆಂಪಯ್ಯನಹುಂಡಿ ಗ್ರಾಮದ ಕೆ.ಅರುಣ್ ಕುಮಾರ್ ಅವರ ಭಾವ ರವಿಕುಮಾರ್ ವ್ಯವಸಾಯ ಮಾಡಿಕೊಂಡಿದ್ದರು. ಭಾನುವಾರ ಬೆಳಿಗ್ಗೆ ಕೆ.ಆರ್. ನಗರದಲ್ಲಿ ನಡೆಯುತ್ತಿದ್ದ ಮದುವೆಗೆ ತಮ್ಮ ಪತ್ನಿ ಸವಿತಾ ಹಾಗೂ ಅಕ್ಕ ಶಾರದಮ್ಮ ಅವರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಮದುವೆ ಮುಗಿಸಿಕೊಂಡು ಊರಿಗೆ ಹಿಂತಿರುಗುತ್ತಿದ್ದ ವೇಳೆ ಮದುವೆ ಮುಗಿಸಿಕೊಂಡು ಬರುವ ವೇಳೆ ಎಂ.ಸಿ.ಹುಂಡಿ ಬಳಿ ಎದುರಿನಿಂದ ಬಂದ ಮಾರುತಿ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:-ಗುಂಡ್ಲುಪೇಟೆ | ಕಾರು-ಲಾರಿ ಡಿಕ್ಕಿ : ಇಬ್ಬರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರ

ಎದುರಿನಿಂದ ಬರುತ್ತಿದ್ದ ಕಾರಿನಲ್ಲಿ ಇದ್ದವರು ಮೈಸೂರಿನ ಬೆಲವತ್ತ ಮಂಟಿಯವರಾಗಿದ್ದು ಚಾಮರಾಜನಗರದಲ್ಲಿ ನಡೆಯುತ್ತಿದ್ದ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು ಎಂದು ತಿಳಿದುಬಂದಿದೆ. ಈ ಕಾರಿನಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ವರುಣ ಪೊಲೀಸ್ ಠಾಣೆಯ ಎಸ್‌ಐ ಲೋಕೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!