ಮೈಸೂರು: ಭಾರೀ ಮಳೆಯಿಂದ ಮನೆಯ ಗೋಡೆ ಮೇಲ್ಛಾವಣಿ ಸಹಿತ ಕುಸಿದಿರುವ ಘಟನೆ ಎಚ್. ಡಿ. ಕೋಟೆ ತಾಲ್ಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಘಟನೆ ನಡೆಯುತ್ತಿದ್ದಂತೆ ನೆರವಿಗೆ ಧಾವಿಸಿದ ಸ್ಥಳೀಯರು ಮನೆಯ ಒಳಗಡೆ ಸಿಲುಕಿದವರನ್ನು ಮೇಲ್ಚಾವಣಿ ಮೂಲಕವೇ ಹೊರಗೆ ಕರೆ ತಂದ ರಕ್ಷಣೆ ಮಾಡಿದ್ದಾರೆ.
ಹೆಬ್ಬಲಗುಪ್ಪೆ ನಿವಾಸಿ ಗೋವಿಂದಶೆಟ್ಟಿ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಗೋವಿಂದ ಶೆಟ್ಟಿ ಮನೆಯಿಂದ ಹೊರಗೆ ಹೋಗಿದ್ದಾಗ ಘಟನೆ ಸಂಭವಿಸಿದೆ.
ಗೋವಿಂದ ಶೆಟ್ಟಿ ಪತ್ನಿ ರಾಧ, ಪುತ್ರ ರೋಹಿತ್, ದೊಡ್ಡಮ್ಮ ಸುವರ್ಣಮ್ಮ ಅವರನ್ನು ರಕ್ಷಣೆ ಮಾಡಲಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆ ಕಳೆದುಕೊಂಡ ಗೋವಿಂದಶೆಟ್ಟಿ ಈಗ ಕಂಗಾಲಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.





