Mysore
20
broken clouds

Social Media

ಭಾನುವಾರ, 25 ಜನವರಿ 2026
Light
Dark

ನಾಳೆ ಮೈಸೂರಿಗೆ ಸಿಎಂ : ಗ್ರೇಟರ್‌ ಮೈಸೂರು ರಚನೆ ಕುರಿತು ಸಭೆ

ಮೈಸೂರು : ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ನಗರಕ್ಕೆ ಆಗಮಿಸಲಿದ್ದಾರೆ.

ಬೆಳಿಗ್ಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೊರಡುವ ಸಿಎಂ, ಮೈಸೂರು ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಜೆ.ಪಿ.ನಗರದಲ್ಲಿ ಪಕ್ಷದ ನಾಯಕರೊಬ್ಬರ ಮನೆಗೆ ಭೇಟಿ,ನಂತರ, ಖಾಸಗಿ ಕಲ್ಯಾಣಮಂಟಪದಲ್ಲಿ ಮದುವೆ ವಿವಾಹದಲ್ಲಿ ಭಾಗಿಯಾಗಲಿದ್ದಾರೆ. ಬೆಳಿಗ್ಗೆ ೧೦.೩೦ಕ್ಕೆ, ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಡಳಿತ ಭವನ ಎದುರು ನಿರ್ಮಿಸಿರುವ ಡಿ.ದೇವರಾಜ ಅರಸು ಪ್ರತಿಮೆ ಅನಾವರಣ ಮಾಡುವರು.

ಇದನ್ನು ಓದಿ: ಗ್ರೇಟರ್ ಬೆಂಗಳೂರು ಚುನಾವಣೆಗೆ ತಯಾರಿ ; ಉಸ್ತುವಾರಿ ಸಮಿತಿ ರಚಿಸಿದ ಎಚ್‌ಡಿಕೆ

ನಂತರ ನಗರಪಾಲಿಕೆ ವಲಯ ಕಚೇರಿ ಮೂರರಲ್ಲಿ ಗ್ರೇಟರ್ ಮೈಸೂರು ರಚನೆ ಕುರಿತು ಸಭೆ ನಡೆಸಲಿದ್ದಾರೆ. ನಂತರ,ಮಧ್ಯಾಹ್ನ ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ೪ಕ್ಕೆ, ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಚಲನಚಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳಿಕ, ವಿಶ್ರಾಂತಿ ಪಡೆಯಲಿರುವ ಸಿಎಂ,ಸಂಜೆ ಹೋಟೆಲ್ ಸದರನ್ ಸ್ಟಾರ್‌ನಲ್ಲಿ ನಡೆಯಲಿರುವಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ,ತಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡವರು. ಮರುದಿನ ಬೆಂಗಳೂರಿಗೆ ತೆರಳುವರು ಎಂದು ತಿಳಿಸಲಾಗಿದೆ.

Tags:
error: Content is protected !!