Mysore
23
broken clouds

Social Media

ಗುರುವಾರ, 14 ಮೇ 2026
Light
Dark

ತಾವು ಓದಿದ ಶಾಲೆಗಳಿಗೆ ತಲಾ 10 ಲಕ್ಷ ದೇಣಿಗೆ ನೀಡಿದ ಸಿಎಂ ಸಿದ್ದರಾಮಯ್ಯ

ಮೈಸೂರು: ತಾವು ಪ್ರಾಥಾಮಿಕ ಶಿಕ್ಷಣ ಪಡೆದ ಕುಪ್ಪೇಗಾಲ ಮತ್ತು ಸಿದ್ದರಾಮನಹುಂಡಿ ಸರ್ಕಾರಿ ಶಾಲೆಗಳಿಗೆ ವಯಕ್ತಿಕವಾಗಿ ತಲಾ 10 ಲಕ್ಷ ರೂ ಗಳನ್ನು ದೇಣಿಗೆಯಾಗಿ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ.

ರಾಜ್ಯ ಸರ್ಕಾರವು ಶಾಲೆಗಳ ಅಭಿವೃದ್ಧಿಗೆ ‘ನನ್ನ ಶಾಲೆ, ನನ್ನ ಜವಾಬ್ದಾರಿ’ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಶಾಲೆಗಳಲ್ಲಿ ಓದಿದ ಹಳೆ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿಯ ಜವಾಬ್ದಾರಿಯನ್ನು ನೀಡಲಾಗುತ್ತಿದ್ದು, ಯೋಜನೆಯ ಆರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಾವು ಓದಿದ ಶಾಲೆಗಳಿಗೆ ದೇಣಿಗೆ ನೀಡಿದ್ದು, ಮಾರ್ಚ್ 7ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.

ಹತ್ತನೇ ವರ್ಷದವರೆಗೂ ಸಿದ್ದರಾಮಯ್ಯ ಶಾಲೆಗೆ ಹೋಗಿರಲಿಲ್ಲ. ಸಿದ್ದರಾಮನಹುಂಡಿಯಿಂದ 1.5 ಕಿ.ಮೀ ದೂರವಿರುವ ಕುಪ್ಪೆಗಾಲ ಶಾಲೆಗೆ 5ನೇ ತರಗತಿಗೆ ನೇರವಾಗಿ ಪ್ರವೇಶ ಪಡೆದ ಅವರು, 7 ತರಗತಿವರೆಗೂ ಇಲ್ಲಿಯೇ ಶಿಕ್ಷಣ ಪಡೆದಿದ್ದರು’ ಎಂದು ತಿಳಿಸಿದರು.

2015-16ರಲ್ಲಿ ಶಾಲೆಗೆ 1 ಎಕರೆ ಜಾಗದಲ್ಲಿ 8 ಕೊಠಡಿ, 2 ಶೌಚಾಲಯ ಹಾಗೂ ಕಾಂಪೌಂಡ್ ಸೇರಿದಂತೆ ಹೊಸ ಕಟ್ಟಡ ಕಟ್ಟಿಸಿಕೊಟ್ಟು ಉನ್ನತೀಕರಿಸಿದ್ದರು, ಇದೀಗ 10 ಲಕ್ಷ ವೈಯಕ್ತಿಕ ನೆರವು ನೀಡುತ್ತಿದ್ದಾರೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಹೇಳಿದರು.

ಈ ನೀಡಿರುವ ನೆರವಿನಿಂದ ಸ್ಮಾರ್ಟ್ ಕ್ಲಾಸ್‌ಗಳನ್ನು ನಡೆಸಲು ಅನುಕೂಲವಾಗುವಂತೆ ಸ್ಮಾರ್ಟ್ ಟಿವಿ, ಪ್ರೊಜೆಕ್ಟ‌ರ್ ತರಲಾಗುವುದು ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!