ಮೈಸೂರು: ನನಗೆ ಮತ್ತೆ ಮತ್ತೆ ಅದನ್ನೇ ಕೇಳಬೇಡಿ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದೇ ಆಗುತ್ತದೆ. ಈ ವಿಚಾರದ ಬಗ್ಗೆ ಎಷ್ಟು ಬಾರಿ ಸ್ಪಷ್ಟೀಕರಣ ನೀಡಲಿ ಹೇಳಿ?….. ಸುದ್ದಿಗಾರರು ಕೇಳಿದ ಸಿಎಂ ಬದಲಾವಣೆ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರು ಹೇಳಿರುವ ಪರಿ ಇದು.
ಇಂದು ಜಿಲ್ಲೆಯ ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪದೇ ಪದೇ ಇದನ್ನೇ ಕೇಳಬೇಡಿ ಎಂದು ಗರಂ ಆದರು.
ಇಬ್ಬರು ಸಚಿವರು ಕುಳಿತು ಮಾತನಾಡಿದ ತಕ್ಷಣ ಇದೇ ವಿಚಾರ ಅಂತ ಯಾಕೆ ಗ್ರಹಿಸುತ್ತೀರಾ? ಊಹಾ ಪತ್ರಿಕೋದ್ಯಮ ಬಿಟ್ಟುಬಿಡಿ. ಡಿನ್ನರ್ ಮೀಟಿಂಗ್ ಅಥವಾ ಸಭೆ ಮಾಡುವುದು ತಪ್ಪಲ್ಲ. ನೀವು ಅದರಲ್ಲಿ ಹುಡುಕುವ ಗ್ರಹಿಕೆ ಸರಿ ಇಲ ಅಷ್ಟೇ ಎಂದು ಹೇಳಿದರು.