ಮೈಸೂರು: ಮೈಸೂರು ಯುವಾ ಬ್ರಿಗೇಡ್ ವತಿಯಿಂದ ಚಾಮುಂಡಿ ಬೆಟ್ಟದ ಮೆಟ್ಟಿಲಿನಲ್ಲಿ, ಬೆಟ್ಟದ ಸ್ವಚ್ಚತಾ ಅಭಿಯಾನ, ಪ್ಲಾಸ್ಟಿಕ್, ಮದ್ಯದ ಸೀಸೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಬ್ರಿಗೇಡ್‌ನ ನೂರಾರು ಕಾರ್ಯಕರ್ತರು ನಡೆಸಿದರು.
ಸ್ವಚ್ಚತಾ ಅಭಿಯಾನಕ್ಕೆ ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯತಿ ಕಾರ್ಯಾಲಯ ಕೈಜೋಡಿಸಿ. ತ್ಯಾಜ್ಯ ಸಂಗ್ರಹಣೆ, ವಿಲೇವಾರಿಗೆ ಟ್ರಾಕ್ಟರ್ ವ್ಯವಸ್ಥೆಯನ್ನು ಒದಗಿಸಿದರು. ಎರಡು ಟ್ರ್ಯಾಕ್ಟರ್‌ಗೂ ಹೆಚ್ಚಿನ ಪ್ಲಾಸ್ಟಿಕ್ ಬಾಟಲ್, ಕವರ್, ಮದ್ಯದ ಸೀಸೆಗಳು ಸೇರಿದಂತೆ ತ್ಯಾಜ್ಯವನ್ನು ಸಂಗ್ರಹಿಸಿದರು. ಜೊತೆಗೆ ಬೆಟ್ಟದ ಮೆಟ್ಟಿಲು ಹತ್ತುವ ಭಕ್ತರಿಗೆ ಹಾಗೂ ಚಾರಣಿಗರಿಗೆ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಯಿತು.
ಅಭಿಯಾನದಲ್ಲಿ ಭಾಗಹಿಸಿ ಮಾತನಾಡಿದ ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ್, ಪ್ಲಾಸ್ಟಿಕ್ ಬಾಟಲ್, ಕವರ್ ಸಿಗುವುದು ಸಾಮಾನ್ಯ. ಆದರೆ ಪವಿತ್ರ ಕ್ಷೇತ್ರದ ಉದ್ದಕ್ಕೂ ಸಾವಿರಾರು ಮದ್ಯದ ಸೀಸೆಗಳು ಸಿಕ್ಕಿದ್ದು ಆತಂಕದ ಸಂಗತಿ ಎಂದರು.
ಧಾರ್ಮಿಕ ಶ್ರದ್ದೆ ಇರುವ ಸ್ಥಳಗಳಲ್ಲಿ ಈ ರೀತಿ ಮಾಡಿರುವುದು ಹೀನ ಕೃತ್ಯ. ಮದ್ಯ, ಸಾರಾಯಿ ಕುಡಿಯಲೆಂದೆ ಬಾರ್, ಪಬ್, ರೆಸ್ಟೋರೆಂಟ್‌ಗಳಿವೇ ಅವನ್ನು ಬಳಸಬೇಕು. ಹೊರತು ಪವಿತ್ರ ಸ್ಥಳಗಳಲ್ಲಿ ಇಂತಹ ಕೃತ್ಯ ಎಸಗುವ ದುಷ್ಟಕೃತ್ಯಗಳು. ಅಂತಹ ಕಿಡಿಗೇಡಿಗಳ ವಿರುದ್ದ ಪೋಲಿಸರು ಕಟ್ಟು ನಿಟ್ಟಿನ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಬ್ರಿಗೇಡ್‌ನ ಮೈಸೂರು ವಿಭಾಗ ಸಂಚಾಲಕ ಪ್ರಮೋದ್, ಜಿಲ್ಲಾ ಸಂಚಾಲಕ ನಿತಿನ್, ಸಾಗರ್, ರಾಮಾನುಜ, ಪ್ರಶಾಂತ್, ಅಶ್ವಥ್, ಯೋಗೀಶ್, ಸೂರಿ, ಸ್ಕಂದ, ಪರಿಕ್ಷಿತ್, ಶಶಾಂಕ್, ಓಂ, ರಮೇಶ್, ನಾರಯಣ, ಮಂಜುನಾಥ್, ನರಸಿಂಹ ಮೂರ್ತಿ, ಸುಹಾಸ್, ಸುಶ್ಮಿತಾ, ಸುರಭಿ , ರಚನಾ ಶಿವಕುಮಾರ್, ದರ್ಶಿನಿ, ರೋಜಾ, ಶಿಲ್ಪಾ ರವಿ, ಪ್ರೀತಮ್ ದೈವಿಕ್, ಶ್ರೀನಿಧಿ, ಮಯೂರ್, ಚರಣ್, ಶಿವಕುಮಾರ್ , ದಿಲೀಪ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.





