ಮೈಸೂರು : ಮಾವಿನಹಣ್ಣು ಬೆಳೆಯಲ್ಲಿ ಪಾಲು ನೀಡುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಒಡೆಯರ ಹೋಸಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಮಲ್ಲೇಶ್ (50) ಕೊಲೆಯಾದ ವ್ಯಕ್ತಿ. ಮೃತರ ತಮ್ಮನ ಮಗ ಚೇತನ್ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ.
ಘಟನೆ ವಿವರ ; ಜಮೀನಿನಲ್ಲಿ ಮಾವಿನ ಫಲವು ಬೆಳೆದಿದೆ. ಬೆಳೆದ ಬೆಳೆಯಲ್ಲಿ ಮೃತ ಮಲ್ಲೇಶ್‌ರಿಂದ ಚೇತನ್ ಪಾಲು ಕೇಳಿದ್ದಾರೆ. ಆದರೆ ಮಲ್ಲೇಶ್ ಪಾಲು ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಚೇತನ್ ಚಾಕುವಿನಿಂದ ಚುಚ್ಚಿ ಮಲ್ಲೇಶ್‌ರನ್ನು ಬರ್ಬರವಾಗಿ ಕೊಂದಿದ್ದಾನೆ. ಬಳಿಕ ಆರೋಪಿ ಚೇತನ್ ತಲೆಮರೆಸಿಕೊಂಡಿದ್ದಾರೆ.
ಈ ಘಟನೆ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





