Mysore
24
clear sky

Social Media

ಸೋಮವಾರ, 20 ಏಪ್ರಿಲ 2026
Light
Dark

ಹಿಮಾಲಯ ಹತ್ತಲು ಹೊರಟ ಪೌರಕಾರ್ಮಿಕ ಮಕ್ಕಳು ; ಸಾಹಸಯಾತ್ರೆಯ ಮಾರ್ಗ ತೋರಿಸಲಿರುವ ಟೈಗರ್‌ ಅಡ್ವೆಂಚರ್‌ ಫೌಂಡೇಷನ್‌ !

ಮೈಸೂರು : ಉದ್ಯೋಗಿಗಳು, ಸ್ಥಿತಿವಂತರು ಮಾತ್ರ ಹಿಮಾಲಯ ಪರ್ವತಾರೋಹಣ ನಡೆಸಲಿದ್ದಾರೆ ಎನ್ನುವ ಮನಸ್ಥಿತಿಯಲ್ಲಿರುವಾಗ ನಗರದ ಟೈಗರ್‌ ಅಡ್ವೆಂಚರ್‌ ಫೌಂಡೇಷನ್‌ ಪೌರಕಾರ್ಮಿಕ ಮಕ್ಕಳು ಹಾಗೂ ಆದಿವಾಸಿ ಮಕ್ಕಳನ್ನು ಸಾಹಸಯಾತ್ರೆಗೆ ಕರೆದೊಯ್ಯಲು ಸಿದ್ಧವಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಚಾರಣ ಕೈಗೊಂಡ ಟೈಗರ್ ಅಂಡ್ವೆಂಚರ್ ಫೌಂಡೇಷನ್ 22 ಜನರಿರುವ ತಂಡದೊಂದಿಗೆ ಇದೇ ಏ.23ಕ್ಕೆ ಹೊರಟು ಮೇ 8 ರವರಗೆ ಹಿಮಾಲಯ ಪರ್ವತಾರೋಹಣ ನಡೆಸಲಿದೆ.

ತಂಡಕ್ಕೆ ಜೂನೂನ್ 2025 ಎಂದು ಹೆಸರಿಡಲಾಗಿದೆ. ತಂಡದ ನಾಯಕ ಅನಿಲ್ ಕುಮಾರ್ ನಾಯಕತ್ವದಲ್ಲಿ ಮಕ್ಕಳು ಚಾರಣ ನಡೆಸಲಿದ್ದಾರೆ.

ಚಾರಣದಲ್ಲಿ 8 ಪೌರಕಾರ್ಮಿಕರ ಮಕ್ಕಳು, ಇಬ್ಬರು ಮಾವುತರು, ಇಬ್ಬರು ಗಸ್ತು ಅರಣ್ಯ ಪಾಲಕರು ಸೇರಿ 22 ಮಂದಿ ಇರಲಿದ್ದಾರೆ.

ಸುಮಾರು 15 ಸಾವಿರ ಅಡಿಗಳ ಎತ್ತರದಲ್ಲಿರುವ ಮೌಂಟ್ ಪಾಂಗರ್ ಚುಲ್ಲ ಎಂಬ ಜಾಗಕ್ಕೆ ಚಾರಣದ ಗುರಿ ಇಟ್ಟು ಮಕ್ಕಳು ಹೊರಟಿದ್ದಾರೆ .

ಮೊದಲ ಬಾರಿಗೆ ವಿಮಾನ ಏರಿ ಹೋಗುತ್ತಿದ್ದೇವೆ. ಜೀವನದಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವ ಗುಣಗಳನ್ನು ಬೆಳೆಸಿಕೊಳ್ಳಲು ಇದು ಸಹಾಯವಾಗಲಿದೆ. ನಮ್ಮ ಜೀವನದ ಸವಾಲುಗಳನ್ನ ಮೆಟ್ಟಿ ನಿಲ್ಲಬೇಕಾದರೆ ಇಂತಹ ಸಾಹಸಗಳು ಮುಖ್ಯ. ಧೈರ್ಯವಾಗಿ ಮುನ್ನುಗ್ಗುವ ಗುರಿ ಇದೆ. ಎಲ್ಲಾ ಅನುಭವಗಳು ಹೇಗಿರಲಿದೆ ಎಂಬ ಕುತೂಹಲ ನಮಗೂ ಇದೆ ಎಂದು ಮಕ್ಕಳು ಸಂತಸ ವ್ಯಕ್ತಪಡಿಸಿದರು.

Tags:
error: Content is protected !!