ಮೈಸೂರು : ರಾಜ್ಯದಲ್ಲಿ ಒಂದೇ ವರ್ಷದ ಅವಧಿಯಲ್ಲಿ ಸುಮಾರು 29 ಸಾವಿರ ಬಾಲ್ಯ ವಿವಾಹ ನಡೆದಿರುವ ಕುರಿತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕಳವಳ ವ್ಯಕ್ತಪಡಿಸಿದರು.
ಮಂಗಳವಾರ ನಗರದ ತಾಯಿ ಮತ್ತು ಮಕ್ಕಳ ತುಳಸಿದಾಸಪ್ಪ ಆಸ್ಪತ್ರೆಗೆ ಭೇಟಿ ನೀಡಿ, ಸೌಲಭ್ಯಗಳ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವಿಂದು 21ನೇ ಶತಮಾನದಲ್ಲಿದ್ದರೂ ಇನ್ನೂ ಬಾಲ್ಯ ವಿವಾಹ ಪದ್ಧತಿ ನಿಲ್ಲದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಬಡತನ,ಅರಿವಿನ ಕೊರತೆಯಿಂದ ಬಾಲ್ಯ ವಿವಾಹ: ಬಡತನ ಮತ್ತು ಅರಿವಿನ ಕೊರತೆಯೇ ಬಾಲ್ಯ ವಿವಾಹಕ್ಕೆ ಕಾರಣ. ಪೋಷಕರು ತಮ್ಮ ಮಕ್ಕಳ ಮೇಲಿನ ಜವಾಬ್ದಾರಿ ಕಳೆದುಕೊಳ್ಳುವ ಕಾತುರದ ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳು ಪ್ರೀತಿ, ಪ್ರೇಮದ ಬಲೆಗೆ ಬೀಳುವುದನ್ನು ತಪ್ಪಿಸಲು ಬಾಲ್ಯವಿವಾಹ ವಾಗುವುದಕ್ಕೆ ಕಾರಣ ಎಂದು ವರದಿಗಳು ಹೇಳಿತ್ತಿವೆ. ನಮ್ಮ ಜನ ಎಲ್ಲಿವರಗೆ ಅರಿವು ಪಡೆಯುವುದಿಲ್ಲವೋ ಅಲ್ಲಿಯವರೆಗೂ ಇಂತ ಸಾಮಾಜಿಕ ಅನಿಷ್ಟ ಪದ್ದತಿಗಳು ಮುಂದುವಯುತ್ತಲೇ ಇರುತ್ತವೆ ಎಂದು ಬೇಸರಿಸಿದರು.





