Mysore
26
clear sky

Social Media

ಬುಧವಾರ, 25 ಮಾರ್ಚ್ 2026
Light
Dark

ಚಾಮರಾಜ ಕ್ಷೇತ್ರ : 4 ಕೋಟಿ ವೆಚ್ಚದ ಕಾಮಗಾರಿಗೆ ಹರೀಶ್‌ ಗೌಡ ಚಾಲನೆ

Chamaraj constituency Harish Gowda launches work worth Rs 4 crore Project

ಮೈಸೂರು : ಶಾಸಕರ ಎಸ್.ಎಫ್.ಸಿ. ವಿಶೇಷ ಅನುದಾನದಲ್ಲಿ ಬಿಡುಗಡೆಯಾಗಿರುವ ಅಂದಾಜು 4 ಕೋಟಿ ವೆಚ್ಚದ ಕಾಮಗಾರಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

ವಾರ್ಡ್ ನಂ. 22ರ ವ್ಯಾಪ್ತಿಯ ಮಾತೃಮಂಡಳಿ ಶಾಲೆಯಿಂದ ಮಹದೇಶ್ವರ ದೇವಸ್ಥಾನದ ವಾಲ್ಮೀಕಿ ರಸ್ತೆಯವರೆಗೆ ಚರಂಡಿ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿ, ಅಂದಾಜು ಮೊತ್ತ ರೂ.10 ಲಕ್ಷಗಳು, ಹಾಗೂ ವಾರ್ಡ್ ನಂ. 19ರ ವ್ಯಾಪ್ತಿಯ ನಿರ್ಮಲ ಕಾನ್ವೆಂಟ್ ಹತ್ತಿರ ಚರಂಡಿ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿ,ವಿ.ವಿ.ಮೊಹಲ್ಲಾ 13, 14, 12ನೇ ಎ ಹಾಗೂ 8ನೇ ಕ್ರಾಸ್ ರಸ್ತೆ ಅಭಿವೃದ್ಧಿ ಹಾಗೂ ಜಯಲಕ್ಷ್ಮಿಪುರಂನ 7ನೇ ಮೇನ್ ರಸ್ತೆ ಹಾಗೂ ಇತರ ರಸ್ತೆಗಳ ಅಭಿವೃದ್ಧಿ ಕಾಮಗಾರಿ. ಅಂದಾಜು ಮೊತ್ತ ರೂ. 10 ಲಕ್ಷ, ಮತ್ತು ವಾರ್ಡ್ ನಂ. 24ರ ಶೇಷಾದ್ರಿ ಅಯ್ಯರ್ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಪಾಲಿಕೆ ಅಧಿಕಾರಿಗಳಾದ ಯೋಗನಂದ, ವೆಂಕಟೇಶ್,ರಾಮಣ್ಣ,ಕೃಷ್ಣ ಮೂರ್ತಿ, ಬ್ಲಾಕ್ ಅಧ್ಯಕ್ಷರುಗಳಾದ ರವಿ, ರಮೇಶ್ ರಾಯಪ್ಪ, ಮುಖಂಡರುಗಳಾದ ನಾಗರಾಜ್, ಮರಿಸ್ವಾಮಿ, ಕುಮಾರ್, ಯೋಗೇಶ್, ಮಹದೇಶ್, ಕೃಪಾನಂದ, ಗುರುರಾಜ್, ಸೌಭಾಗ್ಯ, ನಿತಿನ್ ಪುಟ್ಟಸ್ವಾಮಿ, ರಾಜಣ್ಣ, ಮಾಜಿ ಪಾಲಿಕೆ ಸದಸ್ಯರಾದ ರಮೇಶ್, ರಾಮಕೃಷ್ಣ, ಜಯಪ್ರಕಾಶ್, ಸುಶೀಲ ಮರೀಗೌಡ, ಗಾಯತ್ರಿ ನಾರಾಯಣಗೌಡ, ನಿಶಾಂತ್, ಅರುಣ್ ಕುಮಾರ್, ಮಾಜಿ ಪಾಲಿಕೆ ಸದಸ್ಯರಾದ ಎಂ .ಡಿ. ನಾಗರಾಜ್, ಬಾಲರಾಜ್,ಇಮ್ರಾನ್, ಆನಂದ್, ನಂಜುಂಡಿ, ಮಹದೇವ್, ಅನಂತ್ ನಾರಾಯಣ, ಶಿವಕುಮಾರ್, ಇಬ್ರಾಹಿಂ,ವಿನೋದ್, ಹರೀಶ್ ಗೌಡ, ಚಂದ್ರಶೇಖರ್, ಶಾಂತ, ಮಂಗಳ, ಹೇಮಾ ಸಿಂಗ್, ಸಮೀನ, ಮಾಜಿ ಪಾಲಿಕೆ ಸದಸ್ಯರಾದ ಕುಶಾಲ್ ಕುಮಾರ್, ಎಸ್. ಆರ್. ರವಿಕುಮಾರ್, ವರದರಾಜು, ನಿರಂಜನ್, ವರಲಕ್ಷ್ಮೀ, ಕುಮುದ, ದೀಪಕ್ ಪುಟ್ಟಸ್ವಾಮಿ, ಮೋಹನ್, ಸುಹಾಸ್, ರವಿ ನಾಯಕ್, ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.

Tags:
error: Content is protected !!