ನಂಜನಗೂಡು : ಜಾತಿ ವ್ಯವಸ್ಥೆಯಿಂದ ಅಸಮಾನತೆ ನಿರ್ಮಾಣವಾಗಿತ್ತು.ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆಯನ್ನು ತಂದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಂಜನಗೂಡಿನಲ್ಲಿ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಈ ದೇಶದಲ್ಲಿ ಜಾತಿ ಚಾತುರ್ವರ್ಣ ಪದ್ಧತಿ ತಂದು ಹೇರಿದರು. ಜಾತಿ ಪದ್ಧತಿಯನ್ನು ದೇವರು ಮಾಡಿದ್ದಲ್ಲ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆಯನ್ನು ನಿರ್ಮಾಣ ಮಾಡಿದರು ಎಂದು ಅಭಿಪ್ರಾಯಪಟ್ಟರು.
ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಒಂದು ಸಂವಿಧಾನವನ್ನು ನೀಡಿದ್ದಾರೆ. ಅದರಲ್ಲಿ ಸಮಾಜವನ್ನು ಯಾವ ರೀತಿ ಕಟ್ಟಬೇಕು ಎಂಬುದನ್ನು ಹೇಳಿದ್ದಾರೆ. ತಮ್ಮ ಜೀವಮಾನವಿಡಿ ಯಾರಿಗಾಗಿ ಹೋರಾಟ ಮಾಡಿದರು? ಮತ್ತು ನಮಗೆಲ್ಲ ಏನು ಹೇಳಿದ್ದಾರೆ ಹಾಗೆ ನಡೆದುಕೊಳ್ಳೋದೇ ಅವರಿಗೆ ನೀಡುವ ಗೌರವ. ಅಂಬೇಡ್ಕರ್ ಗುಣಗಾನ ಮಾಡೋಣ ಆದರೆ ಅವರು ಹೇಳಿದ ಹಾಗೆ ನಡೆದುಕೊಳ್ಳೋದು ಮುಖ್ಯವಾದದ್ದು ಎಂದು ತಿಳಿಸಿದರು.