ನಂಜನಗೂಡು : ಬೈಕಿ – ಕ್ಯಾಂಟರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರ ಮೃತ ಪಟ್ಟಿರುವ ಘಟನೆ ನಂಜನಗೂಡು ನಗರದಲ್ಲಿ ಸಂಭವಿಸಿದೆ.
ವಸಂತ್ (30) ಮೃತಪಟ್ಟಿರುವ ದುರ್ದೈವಿ. ನಂಜನಗೂಡಿನಲ್ಲಿ ಕೆಲಸದ ನಿಮಿತ್ತ ಮೈಸೂರು ಸಮೀಪದ ಮಾರ್ಬಳ್ಳಿ ಗ್ರಾಮದ ನಿವಾಸಿಯಾದ ವಸಂತ್ ಆಗಮಿಸಿದ್ದಾನೆ. ನೂತನವಾಗಿ ನಿರ್ಮಿಸಿರುವ ರೈಲ್ವೆ ಮೇಲ್ ಸೇತುವೆ ಮೇಲಕ್ಕೆ ತೆರಳುತ್ತಿದ್ದಾಗ ಹಿಂಬದಿಯಿಂದ ಬರುತ್ತಿದ್ದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕೆಳಗಡೆ ಬಿದ್ದ ವೇಳೆ ಆತನ ಮೇಲೆ ಲಾರಿ ಹರಿದಿದೆ. ಬೈಕ್ ಸವಾರ ಸ್ಥಳದಲ್ಲಿ ಸಾವಿಗಿಡಾಗಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





