ಮೈಸೂರಿನ ನಾಲ್ವರು ಅಪ್ರಾಪ್ತ ಬಾಲಕಿಯರನ್ನು ದರೋಡೆಗೆ ಬಳಸಿಕೊಂಡ ಗ್ಯಾಂಗ್
ಮೈಸೂರು : ಕ್ಯಾಬ್ ಮಾಲೀಕನ ಮೇಲೆ ಹಲ್ಲೆ ನಡೆಸಿ ಆತನ ವಾಹನವನ್ನು ದರೋಡೆ ಮಾಡಿದ ಆರೋಪದಡಿ ಬಿಡದಿ ಪೊಲೀಸರು ನಾಲ್ವರು ಅಪ್ರಾಪ್ತ ಬಾಲಕಿಯರೂ ಸೇರಿದಂತೆ ಎಂಟು ಮಂದಿಯ ತಂಡವನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಪುರುಷರು ಮತ್ತು ನಾಲ್ವರು ಅಪ್ರಾಪ್ತ ಬಾಲಕಿಯರು ಮೈಸೂರಿನವರು.
ನ.೨೨ ರಂದು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಮೂರು ಕಾರುಗಳು, ಆರು ದ್ವಿಚಕ್ರ ವಾಹನಗಳು, ಒಂದು ಆಟೋರಿಕ್ಷಾ ಮತ್ತು ಅಪರಾಧಕ್ಕೆ ಬಳಸಿದ ಆಯುಧಗಳು ಸೇರಿದಂತೆ ಸುಮಾರು ೧೬ ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಸಿದ್ಧಾರ್ಥನಗರದ ಹಾಗೂ ನಂಜನಗೂಡಿನಲ್ಲಿ ವಾಸಸುತ್ತಿರುವ ಸದ್ದಾಂ ಹುಸೇನ್, ಕುರುಬರಹಳ್ಳಿ ನಿವಾಸಿ ಶಿವಪ್ರಸಾದ್, ಬೆಂಗಳೂರಿನ ಪಾದರಾಯನಪುರದ ಖಬೀರ್ ಅಲಿಯಾಸ್ ಕಾಳು ಮತ್ತು ಯಶವಂತ್ ಕುಮಾರ್, ಬಳ್ಳಾರಿಯ ನಾಲ್ವರು ಪುರುಷರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತು ಅಪ್ರಾಪ್ತ ಬಾಲಕಿಯರನ್ನು ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ:-ಕಾಂಗ್ರೆಸ್ ಕುರ್ಚಿ ಕದನ | ಖರ್ಗೆ ಜೊತೆ ಸಭೆ ನಡೆಸಿದ ರಾಹುಲ್‌ಗಾಂಧಿ
ನ.೧೮ ರ ರಾತ್ರಿ, ನಾಲ್ವರು ಹುಡುಗರು ಮತ್ತು ನಾಲ್ವರು ಹುಡುಗಿಯರು ಬೆಂಗಳೂರಿನಿಂದ ಬಿಡದಿಯ ಜೋಗನಪಾಳ್ಯ ಗ್ರಾಮಕ್ಕೆ ಹೋಗಲು ಸ್ವಾಮಿಗೌಡ ಅವರ ಒಡೆತನದ ಕ್ಯಾಬ್ ಅನ್ನು ಬುಕ್ ಮಾಡಿದ್ದಾರೆ. ಆರಂಭದಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಲು ಕ್ಯಾಬ್‌ಅನ್ನು ಬುಕ್ ಮಾಡಾಲಾಗಿತ್ತು. ಆದರೆ ಮಧ್ಯದಲ್ಲಿ ಬಿಡದಿಯ ತೋಟದ ಮನೆಗೆ ಹೋಗಲು ತಿಳಿಸಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನಿಗಿರಿ ರಸ್ತೆಯಲ್ಲಿ ಆರೋಪಿಗಳು ಕ್ಯಾಬ್ ಚಾಲಕನ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿ, ಆತನ ವಾಹನದೊಂದಿಗೆ ಪರಾರಿಯಾಗಿದೆ. ಚಾಲಕನ ದೂರಿನ ಆಧಾರದ ಮೇಲೆ, ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರು ಹೇಳುವಂತೆ, ಆ ವ್ಯಕ್ತಿಗಳು ಕದ್ದ ಕಾರಿನಲ್ಲಿ ಬಾಲಕಿಯರನ್ನು ಜಾಲಿ ಡ್ರ್ತ್ಯೈವ್ ಕರೆದುಕೊಂಡು ಹೋಗಿದ್ದಾರೆ. ಕಾರನ್ನು ಮೈಸೂರು ಕಡೆಗೆ ತೆಗೆದುಕೊಂಡು ಬಂದಿದ್ದಾರೆ. ಟೋಲ್ ಪ್ಲಾಜಾಗಳು ಮತ್ತು ಇತರ ಚೆಕ್‌ಪೋಸ್ಟ್‌ಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇದು ದಾಖಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಇದು ಪೊಲಿಸರಿಗೆ ನೆರವಾಗಿದೆ.
ದರೋಡೆ ಮತ್ತು ಸುಲಿಗೆಯ ೧೦ ಪ್ರಕರಣಗಳು :
ಸುಮಾರು ಐದಾರು ತಿಂಗಳ ಹಿಂದೆ, ನಾಲ್ವರು ಪುರುಷರು ಮೈಸೂರಿನ ಸಿಟಿ ರೈಲ್ವೆ ನಿಲ್ದಾಣ ಮತ್ತು ನಜರ್‌ಬಾದ್ ಬಳಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯರೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅವರಿಗೆ ಹಣ ಹಾಗೂ ಐಷಾರಾಮಿ ಜೀವನದ ಭರವಸೆ ನೀಡಿದ್ದಾರೆ. ಇದರಿಂದ ಆಕರ್ಷಿತರಾದ ಹುಡುಗಿಯರು ಅವರೊಂದಿಗೆ ಸೇರಿಕೊಂಡರು ದರೋಡೆಗಳಿಗೆ ಸಹಾಯ ಮಾಡಿದ್ದಾರೆ. ಅಂತಿಮವಾಗಿ ೧೦ ಕ್ಕೂ ಹೆಚ್ಚು ದರೋಡೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಅವರು ಭಾಗಿಯಾಗಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಮೈಸೂರಿನ ಕ್ಯಾಬ್ ಚಾಲಕನ ದರೋಡೆ:
ನ.೧೪ ರಂದು ಬೆಂಗಳೂರು ಪೊಲೀಸರು ಉತ್ತರ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನ ಮೇಲೆ ಚಾಕು ತೋರಿಸಿ ದರೋಡೆ ಮಾಡಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಮೈಸೂರಿನ ಕೆ.ವಿ.ಪ್ರದೀಪ್(೨೯) ನೀಡಿದ ದೂರಿನ ಆಧಾರದ ಮೇಲೆ ಶಿವಾಜಿನಗರ ನಿವಾಸಿ ಮಂಜೂರ್ ಅಬ್ದುಲ್ ಬಾಸಿತ್ ಅಲಿಯಾಸ್ ಧೂಂಡ್ ಎಂಬ ಆರೋಪಿಯನ್ನು ಬಂಧಿಸಿದ್ದರು. ಆರೋಪಿಯು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪ್ರದೀಪ್ ಅವರನ್ನು ಸಂಪರ್ಕಿಸಿ ಬೆಂಗಳೂರಿನ ಶಿವಾಜಿನಗರಕ್ಕೆ ೩ ಸಾವಿರ ರೂ.ಗೆ ಕ್ಯಾಬ್ ಬುಕ್ ಮಾಡಿದ್ದರು.
ರಾತ್ರಿ ೯.೩೦ ರ ಸುಮಾರಿಗೆ ಅವರು ಶಿವಾಜಿನಗರ ತಲುಪಿದ್ದರು. ಇದೇ ವೇಳೆ ಮಂಜೂರ್, ತಮ್ಮ ಸಹೋದರಿ ಥಣಿಸಂದ್ರದಲ್ಲಿ ವಾಸಿಸುತ್ತಿದ್ದಾರೆಂದು ಹೇಳಿ ಥಣಿಸಂದ್ರದ ಮೂಲಕ ಹೋಗೋಣವೆಂದು ಮನವಿ ಮಾಡಿದ್ದನು. ಇದಕ್ಕೆ ಪ್ರದೀಪ್ ಕೂಡ ಒಪ್ಪಿಕೊಂಡಿದ್ದರು. ನಂತರ ಥನಿಸಂದ್ರದಲ್ಲಿ ಮಂದ ಬೆಳಕಿನ ಸ್ಥಳದಲ್ಲಿ, ಮಂಜೂರ್ ಪ್ರದೀಪ್‌ನನ್ನು ಕಾರು ನಿಲ್ಲಿಸಲು ಹೇಳಿದ್ದಾನೆ.
ನಂತರ ಆತ ಚಾಕುವನ್ನು ತೋರಿಸಿ ಪ್ರದೀಪ್‌ಗೆ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ನಂತರ ಅಲ್ಲಿಂದ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಇದೀಗ ಆರೋಪಿಗಳ ಬಂಧನದಿಂದ ೧೦ ಪ್ರಕರಣಗಳು ಇತ್ಯರ್ಥವಾದಂತಾಗಿದೆ.
ಹೆಚ್ಚುವರಿ ಎಸ್ಪಿಗಳಾದ ರಾಮಚಂದ್ರ ಮತ್ತು ರಾಜೇಂದ್ರ, ಡಿವೈಎಸ್ಪಿ ಶ್ರೀನಿವಾಸ್, ಇನ್ಸ್‌ಪೆಕ್ಟರ್ ಶಂಕರ್‌ನಾಯಕ್ ಮತ್ತು ಸಬ್ ಇನ್ಸ್‌ಪೆಕ್ಟರ್‌ಗಳಾದ ಕೃಷ್ಣಮೂರ್ತಿ ಮತ್ತು ನಾಗರಾಜು ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.



