ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಶನಿವಾರ (ಆ.೩) ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಮೈಸೂರು ಚಲೋ ಸಂಬಂಧ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಕೊಂಡಿರುವ ವಿಜಯೇಂದ್ರ, ನಿವೇಶನ ವಂಚಿತ ಸೂರು ರಹಿತರಿಗಾಗಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಾದ ಹಣದ ರಕ್ಷಣೆಗಾಗಿ, ಭ್ರಷ್ಟ ಅಧಿಕಾರಸ್ಥರಿಗೆ ಶಿಕ್ಷೆ ಕೊಡಿಸುವುದಕ್ಕಾಗಿ, ಜನವಿರೋಧಿ ಕಾಂಗ್ರೆಸ್ ಸರ್ಕಾರ ವಿರದ್ಧದ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಹೋರಾಟಕ್ಕೆ ತಾಯಿ ಶ್ರೀ ಚಾಮುಂಡೇಶ್ವರಿಯ ಅನುಗ್ರಹಕ್ಕಾಗಿ ನಿವೇದಿಸಿಕೊಳ್ಳಲಾಯಿತ್ತಲ್ಲದೇ ಪ್ರಾಕೃತಿಕ ವಿಕೋಪದಿಂದ ಬೆಟ್ಟ, ಗುಡ್ಡಗಳು ಕುಸಿದು ಜಲಕಂಟಕಕ್ಕೆ ಸಿಲುಕಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಜನರ ಒಳತಿಗಾಗಿ ದೇವಿಯಲ್ಲಿ ಪ್ರಾರ್ಥಿಸಲಾಯಿತು.
ಪಾದಯಾತ್ರೆಯ ಪ್ರಾರಂಭದ ದಿನವಾದ ಇಂದಿನಿಂದ ಕೊನೆಯ ದಿನದವರೆಗೂ ಬಿಜೆಪಿ ಹಾಗೂ ಜೆಡಿಎಸ್ ನ ಪ್ರಮುಖರು ಹಾಗೂ ಕಾರ್ಯಕರ್ತರು ಜೊತೆಗೂಡಿ ವಿಶ್ವಾಸಪೂರ್ಣ ಹೆಜ್ಜೆಯನ್ನಿಟ್ಟು ಪ್ರತಿಭಟನೆಯನ್ನು ಪರಿಣಾಮಕಾರಿಯಾಗಿ ಹಂತ ತಲುಪಿಸುವ ಸಂಕಲ್ಪ ಮಾಡೋಣ ಎಂದು ಟ್ವೀಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಂ ರಾಜೇಂದ್ರ, ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್.ರಘು ಕೌಟಿಲ್ಯ, ಜಿಲ್ಲಾಧ್ಯಕ್ಷರಾದ ಶ್ರೀ ಎಲ್. ನಾಗೇಂದ್ರ, ಶ್ರೀ ಎಲ್.ಆರ್.ಮಹದೇವಸ್ವಾಮಿ, ಸೇರಿದಂತೆ ಪಕ್ಷದ ಮುಖಂಡರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಮೈಸೂರು ಚಲೋ ಬಗ್ಗೆ ಮಾಹಿತಿ ನೀಡಿದ್ದಾರೆ.