ಮೈಸೂರು: ತಮ್ಮ ಕಾರ್ಖಾನೆ ಸಮೀಪವೇ ಉದ್ಯಮಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮಹಾಜನ ಕಾಲೇಜು ಸಂಸ್ಥಾಪಕರಾದ ದಿ.ವಾಸುದೇವ ಮೂರ್ತಿ ಕುಟುಂಬದ ಕುಡಿಯಾದ ಅರ್ಜುನ್ (40) ಆತ್ಮಹತ್ಯೆಗೆ ಶರಣಾದ ಉದ್ಯಮಿ.
ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲ ಎಸ್.ಎಸ್. ಇಂಡಸ್ಟ್ರೀಸ್ ಎಂಬ ಕಾರ್ಖಾನೆ ನಡೆಸುತಿದ್ದ ಉದ್ಯಮ ಮಂಜುನಾಥ್ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು ಎನ್ನಲಾಗಿದೆ. ಈ ನಡುವೆ ಇಂದು ಮನೆಯಿಂದ ಹೊರಬಂದು ತಮ್ಮ ಕಾರ್ಖಾನೆ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲು ದೂರು ದಾಖಲಾಗಿದೆ.



