ಮೈಸೂರು : ಅಣುವ್ರತ ಸಮಿತಿ ಮೈಸೂರಿನ ತಂಡದೊಂದಿಗೆ ಮೈಸೂರಿನ ಐದು ಶಾಲೆಗಳಿಗೆ ಭೇಟಿ ನೀಡಿದ ಬಾಲಿವುಡ್ ನಟ ಗುರುಪಾಲ್ ಸಿಂಗ್ ಅವರು ವಿಶೇಷ ಮಕ್ಕಳೊಂದಿಗೆ ತಮ್ಮ ಸಂತಸದ ಕ್ಷಣವನ್ನು ಹಂಚಿಕೊಂಡರು.
ಅಣುವ್ರತ ಸಮಿತಿ ಮೈಸೂರು ವತಿಯಿಂದ ಸ್ಪರ್ಶನೀಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಿತಾರೆ ಜಮೀನ್ ಪರ್ ಚಿತ್ರದ ವಿಶೇಷ ಪ್ರದರ್ಶನ ಕಾರ್ಯಕ್ರಮದಲ್ಲಿ ೨೦೦ಕ್ಕಿಂತ ಹೆಚ್ಚು ವಿಶೇಷ ಮಕ್ಕಳ ಜೊತೆಗೆ ೪೦೦ಕ್ಕೂ ಹೆಚ್ಚು ಪೋಷಕರು, ಶಿಕ್ಷಕರು ಮತ್ತು ಸ್ವಯಂಸೇವಕರು ಭಾಗವಹಿಸಿದ್ದರು.
ಈ ಕಾರ್ಯಕ್ರಮದ ವಿಡಿಯೋವನ್ನು ಗುರುಪಾಲ್ ಸಿಂಗ್ ಅವರಿಗೆ ಕಳುಹಿಸಲಾಗಿತ್ತು. ಮಂಗಳವಾರ ಗುರುಪಾಲ್ ಸಿಂಗ್ ಅವರು ಮೈಸೂರಿಗೆ ಆಗಮಿಸಿ ಅಣುವ್ರತ ಸಮಿತಿ ತಂಡದೊಂದಿಗೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಕೆಲ ಸಮಯ ಕಳೆದರು. ಜೆಎಸ್‌ಎಸ್ ಸಹಾನಾ ಶಾಲೆ, ನಿರೀಕ್ಷೆ ವಿಶೇಷ ಶಾಲೆ, ಗ್ರೇಸ್ ವಿಶೇಷ ಶಾಲೆ, ವಿಸ್ಡಮ್ ವಿಶೇಷ ಶಾಲೆ ಹಾಗೂ ಎಂ.ಜೆ. ಸೂಫಿ ಶಾಲೆಗಳಿಗೆ ಗುರುಪಾಲ್ ಸಿಂಗ್ ಭೇಟಿ ನೀಡಿದ್ದು, ಈ ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಎಲ್ಲಾ ಶಾಲೆಗಳಲ್ಲಿಯೂ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.





