ನಂಜನಗೂಡು : ಕೆಪಿಸಿಸಿ ಕಾರ್ಯಾಧ್ಯಕ್ಷ ದಿ.ಧ್ರುವನಾರಾಯಣ್ ಅವರ ಸವಿ ನೆನಪಿನಲ್ಲಿ ನಂಜನಗೂಡಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನ ಆಯೋಜನೆ ಮಾಡಲಾಗಿತ್ತು.
ನಗರದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಧ್ರುವನಾರಾಯಣ್ ಅಭಿಮಾನಿಗಳು ಆಯೋಜನೆ ಮಾಡಿದ್ದ ಬೃಹತ್ ರಕ್ತದಾದ ಶಿಬಿರಕ್ಕೆ ದರ್ಶನ್ ಧ್ರುವನಾರಾಯಣ್ ಅವರು ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು ರಕ್ತದಾನ ಶ್ರೇಷ್ಠದಾನ ಇದರಿಂದ ಹಲವಾರು ಜೀವಗಳನ್ನು ಉಳಿಸಬಹುದು ತುರ್ತು ಸಂದರ್ಭದಲ್ಲಿ ಪ್ರಾಣಾಪಾಯದಲ್ಲಿರುವವರ ಜೀವ ಉಳೀಸಲು ರಕ್ತ ಬಹಳ ಮುಖ್ಯ, ನಮ್ಮ ತಂದೆಯವರ ನೆನಪಿನಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವ ನಂಜನಗೂಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ.ಮುಂದೆಯೂ ಕೂಡ ನಮ್ಮ ತಂದೆಯವರ ನೆನಪಿನಲ್ಲಿ ಪ್ರತಿ ವರ್ಷ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ನಮ್ಮ ತಂದೆಯವರು ಕೂಡ ಅಪರೂಪದ ಎ.ಬಿ ಪಾಸಿಟಿವ್ ರಕ್ತದ ಗುಂಪನ್ನ ಹೊಂದಿದ್ದರು,ಅವರ ಹೆಸರಿನಲ್ಲಿ ಈ ರೀತಿ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಇದೇ ವೇಳೆ ದರ್ಶನ್ ಅವರು ಧ್ರುವನಾರಾಯಣ್ ಅವರ ನೆನಪಿಗಾಗಿ ವಿವಿಧ ಬಗೆಯ ಸಸಿಗಳನ್ನು ಕಾರ್ಯಕರ್ತರಿಗೆ ವಿತರಣೆ ಮಾಡಿದರು.
ಧ್ರುವನಾರಾಯಣ್ ಅಭಿಮಾನಿಗಳು ಹಾಗೂ ಲಯನ್ಸ್ ಜೀವಧಾರ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದ ಸುಮಾರು 150 ಕ್ಕೂ ಹೆಚ್ಚು ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನದ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕುರಟ್ಟಿ ಮಹೇಶ್ ,ಶಂಕರ್, ಶ್ರೀಕಂಠ ನಾಯಕ,ಮುಖಂಡರಾದ ಮಂಜುನಾಥ್,ಗೋವಿಂದ್ ರಾಜ್ ನಾಗರಾಜಯ್ಯ, ಧ್ರುವ ನಾರಾಯಣ್ ಅವರ ಅಭಿಮಾನಿ ಬಳಗದ ಯುವಕರು,ನಗರಸಭಾ ಸದಸ್ಯರು ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.