Mysore
24
overcast clouds

Social Media

ಭಾನುವಾರ, 01 ಫೆಬ್ರವರಿ 2026
Light
Dark

ಟ್ರಾಕ್ಟರ್‌ ಡಿಕ್ಕಿ : ಬೈಕ್‌ ಸವಾರ ಸಾವು

Biker dies in tractor collision

ತಿ.ನರಸೀಪುರ : ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ನಂಜನಗೂಡು ರಸ್ತೆಯ ಆರ್‌ಎಂಸಿ ಬಳಿ ಶನಿವಾರ ರಾತ್ರಿ ನಡೆದಿದೆ.

ತಾಲ್ಲೂಕಿನ ಹೆಳವರಹುಂಡಿ ಗ್ರಾಮದ ವೀರಭದ್ರಪ್ಪ ಎಂಬವರ ಪುತ್ರ ಕುಮಾರ ಅಲಿಯಾಸ್ ಬಸವಣ್ಣ ಮೃತಪಟ್ಟವರು.

ಕುಮಾರ್ ಅವರು ಶನಿವಾರ ರಾತ್ರಿ 10:20 ರ ಸಮಯದಲ್ಲಿ ತಿ.ನರಸೀಪುರ ಪಟ್ಟಣದಿಂದ ಸ್ವಗ್ರಾಮ ಹೆಳವರ ಹುಂಡಿ ಗ್ರಾಮಕ್ಕೆ ಬೈಕ್‌ನಲ್ಲಿ ನಂಜನಗೂಡು ಏಕಮುಖ ರಸ್ತೆಯಲ್ಲಿ ಎಡ ಭಾಗದಲ್ಲಿ ಹೋಗುತ್ತಿದ್ದ ವೇಳೆ ಹೆಳವರಹುಂಡಿ ಗ್ರಾಮದ ಕಡೆಯಿಂದ ಏಕಮುಖ ಸಂಚಾರವಿದ್ದರೂ ಬಲಭಾಗದಲ್ಲಿ ಟ್ರಾಕ್ಟರ್‌ಅನ್ನು ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಬೈಕ್ ಸವಾರನಿಗೆ ತೀವ್ರವಾದ ಗಾಯಗಳಾಗಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಸ್ನೇಹಿತರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಅಪಘಾತ ಮಾಡಿದ ಟ್ರಾಕ್ಟರ್ ಚಾಲಕ ರಸ್ತೆಯಲ್ಲಿಯೇ ಟ್ರಾಕ್ಟರ್ ಹಾಗೂ ಟ್ರಾಲಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಮೃತ ಕುಮಾರನ ಸಹೋದರ ಸೋಮಶೇಖರ್ ಪಟ್ಟಣ ಪೋಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!