Mysore
25
overcast clouds
Light
Dark

40% ಕಮಿಷನ್ ಆರೋಪ ನಾವು ಮಾಡಿದ್ದಲ್ಲ ಡಿ ಕೆ ಶಿವಕುಮಾರ್

ಮೈಸೂರು: ಭಾರತ್ ಜೋಡೋ ಯಾತ್ರೆ  ಬಗ್ಗೆ ಬಿಜೆಪಿ ಅಪಪ್ರಚಾರಕ್ಕೆ ನಾವು ಬಗ್ಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್) ಹೇಳಿದರು. ಶನಿವಾರ ಮೈಸೂರಿನ ನಂಜನಗೂಡಿನಲ್ಲಿ ಪತ್ರಿಕಾಗೋಷ್ಠಿ ಮಾತನಾಡಿ ಬಿಜೆಪಿಗೆ ತಿರುಗೇಟು ನೀಡಿದರು.

ಅದ್ಭುತವಾದ ಬೆಳವಣಿಗೆ ದೇಶದಲ್ಲಿ ನಡೆಯುತ್ತಿದೆ. ಭಾರತ್ ಐಕ್ಯತಾ ಯಾತ್ರೆ ಕಾಂಗ್ರೆಸ್ ಕಾರ್ಯಕ್ರಮ ಅಲ್ಲ, ಬದಲಾಗಿ ಭಾರತದಲ್ಲಿ ಆಗುತ್ತಿರುವ ವೈಮನಸ್ಸಿಗೆ ಉತ್ತರ ಕಂಡು‌ಹಿಡಿಯುವ ಕೆಲಸ‌ ಮಾಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. 40% ಕಮಿಷನ್ ಆರೋಪ ನಾವು ಮಾಡಿದ್ದಲ್ಲ. ಗುತ್ತಿಗೆದಾರರ ಸಂಘ ಹೇಳಿದ್ದನ್ನು ಜನರ ಮುಂದೆ ಇಟ್ಟಿದ್ದೇವೆ. ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟಿದೆ. ಜೊತೆಗೆ ಭ್ರಷ್ಟಾಚಾ ರ ಹೆಚ್ಚಾಗಿದೆ ಎಂದು ಆರೋಪಿಸಿದರು

ದೇಶದಲ್ಲಿ ಇರುವ ನಿರುದ್ಯೋಗದ ಬಗ್ಗೆ ಮಾಧ್ಯಮಗಳೇ ಹೇಳುತ್ತಿವೆ. ಈಗ ಭಯದ ವಾತಾವರಣದಲ್ಲಿ ನಾವು ಬದು ಕುತ್ತಿದ್ದೇವೆ. ದ್ವೇಷ ಅಸೂಯೆ ಹೋಗಿಸಲು ಇಂತಹ ಯಾತ್ರೆಯ ಮೂಲಕ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಭಾರತ್ ಜೋಡೋ ಯಾತ್ರೆಯ ವಿರುದ್ಧ ಮಾಧ್ಯಮವೊಂದರಲ್ಲಿ ದೊಡ್ಡದಾದ ಜಾಹೀರಾತು ನೀಡಲಾಗಿದೆ. ನಮ್ಮ ಬೆಳವಣಿಗೆ ಸಹಿಸದೆ ದೊಡ್ಡ ಜಾಹೀರಾತು ಕೊಟ್ಟಿದ್ದಾರೆ. ಆದರೆ ಇದಕ್ಕೆ ನಾವು ಜಗ್ಗಲ್ಲ, ಬಗ್ಗಲ್ಲ ನಮ್ಮ ಕೆಲಸ ನಾವು ಮಾಡುತ್ತೇವೆ.ಜನರ ಧ್ವನಿಯಾಗಿ ನಾವು ಕೆಲಸ ಮಾಡುತ್ತೇವೆ ಎಂದರು. ಭಾರತ್ ಜೋಡೋ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಶನಿವಾರ ರಾಹುಲ್ ಗಾಂಧಿ 25 ಕಿ.ಮೀ ಹೆಜ್ಜೆ ಹಾಕಲಿದ್ದಾರೆ. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಪಾದಯಾತ್ರೆ ಮತ್ತೆ ಆರಂಭಗೊಂಡಿದೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ