ಮೈಸೂರು : ನಂಜನಗೂಡು ಮದುವೆ ಸಮಾರಂಭದಲ್ಲಿ ಮದುವೆ ಸಂಭ್ರಮದಲ್ಲಿರುವ ನವ ವಧು ವರ ಮತದಾನ ಜಾಗೃತಿ ಮೂಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಂದು ನಗರದ ಅಂಬೇಡ್ಕರ್ ಭವನದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿ ಹೆಬ್ಯಾ ಗ್ರಾಮದ ತುಳಸಿ ಹಾಗೂ ಸೋಮೇಶ್ವರಪುರ ಗ್ರಾಮ ಗಿರೀಶ್ , ಘೋಷವಾಕ್ಯ ಫಲಕ ಹಿಡಿದು ಮತದಾರರ ಫೋಟೋ ಫ್ರೇಮ್‌ನಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ಮೂಲಕ ‘ಏಪ್ರಿಲ್ 26 ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂಬ ಸಂದೇಶ ಸಾರಿದರು.
ಈ ವಿಶೇಷ ಕ್ಷಣಕ್ಕೆ ವಿವಾಹ ವಧು-ವರರ ಸಂಬಂಧಿಕರು, ಸ್ನೇಹಿತರು ಸಾಕ್ಷಿಯಾದರು. ಸ್ವೀಪ್ ಸಮಿತಿಯ ವಿಭಿನ್ನ ಪ್ರಯತ್ನಕ್ಕೆ ನೆರೆದಿದ್ದವರಿಂದ ಪ್ರಶಂಸೆ ವ್ಯಕ್ತವಾಯಿತು.
ಈ ವೇಳೆ ತಾಲ್ಲೂಕು ಸ್ವೀಪ್ ಸಮಿತಿಯ ದಿನೇಶ್, ಕಾವ್ಯ, ಗುರುಸಿದ್ದಯ್ಯ, ನವೀನ್ ಹಾಜರಿದ್ದರು.