ಮೈಸೂರು : ನಿಷೇಧಿತ ಮಾದಕ ವಸ್ತುಗಳಾದ ಡ್ರಗ್ಸ್, ಎಂಡಿಎಂಎ ಗಳನ್ನು ಮಾರಾಟ ಮಾಡಲು ಯತ್ನಿಸಿದ ತೃತೀಯಲಿಂಗಿ ಪೊಲೀಸರ ಅತಿಥಿಯಾಗಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ.
ಬಂಧಿತರಿಂದ 4 ಗ್ರಾಂ 10 ಮಿಲೀ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಶಾಂತಿನಗರದ ಸೈಯದ್ ನೂರುಲ್ಲಾ@ಇಮ್ರಾನ್ @ಲಕ್ಷ್ಮಿ ಬಂಧಿತ ತೃತೀಯ ಲಿಂಗಿ.
ನಿಷೇಧಿತ ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೋಲೀಸರು ದಾಳಿ ನಡೆಸಿದಾಗ ತೃತೀಯಲಿಂಗಿ ಡ್ರಗ್ಸ್ ಸಮೇತ ಸಿಕ್ಕಿಬಿದ್ದಿದ್ದಾರೆ. ಘಟನೆ ಸಂಬಂಧ ಸಿಸಿಬಿ ಠಾಣೆ ಪೊಲೀಸರು ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.





