ಮೈಸೂರು: ಇಂದು ನಡೆಯಬೇಕಿದ್ದ ಅರ್ಜುನ ಆನೆ ಸ್ಮಾರಕ ಉದ್ಘಾಟನೆ ವಿಘ್ನ ಎದುರಾಗಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆಯಲ್ಲಿ ಅರ್ಜುನ ಸ್ಮಾರಕ ಉದ್ಘಾಟನೆಯಾಗಬೇಕಿತ್ತು.
ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರು ಅರ್ಜುನ ಸ್ಮಾರಕ ಉದ್ಘಾಟನೆ ದಿನದಂದೇ ಸ್ಥಳೀಯರ ಜೊತೆ ಆನೆ-ಮಾನವ ಸಂಘರ್ಷ ಕುರಿತು ಚರ್ಚೆ ನಡೆಸುವಂತೆ ಸಚಿವ ಈಶ್ವರ್ ಖಂಡ್ರೆಗೆ ಮನವಿ ಮಾಡಿದ್ದರು.
ಈ ದಿನ ಚರ್ಚೆ ಬೇಡ ಎಂದು ಈಶ್ವರ್ ಖಂಡ್ರೆ ಹೇಳಿದ್ದರು. ಆದರೆ ಸಂವಾದ ಹಾಗೂ ಉದ್ಘಾಟನೆ ಒಂದೇ ದಿನ ನಡೆಯುವಂತೆ ಅನಿಲ್ ಚಿಕ್ಕಮಾದು ಒತ್ತಡ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಒತ್ತಡಕ್ಕೆ ಮಣಿದು ಅರ್ಜುನ ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.





