Mysore
24
overcast clouds

Social Media

ಬುಧವಾರ, 30 ಏಪ್ರಿಲ 2025
Light
Dark

ನೀಟ್‌ ಪರೀಕ್ಷೆ: ಅರ್ಜುನ್‌ ಕಿಶೋರ್‌ ದೇಶಕ್ಕೆ ಪ್ರಥಮ; ಟಾಪರ್‌ ಲಿಸ್ಟ್‌ನಲ್ಲಿ ಆರು ವಿದ್ಯಾರ್ಥಿಗಳು

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌-ಯುಜಿ) ಮೈಸೂರು ಮೂಲದ ದಂಪತಿಯ ಮಗನಾದ ಅರ್ಜುನ್‌ ಕಿಶೋರ್‌ ಅವರು ಭಾರತ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಇವರು ಪರೀಕ್ಷೆಯಲ್ಲಿ 720ಕ್ಕೆ 720 ಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಮೈಸೂರು ವೈದ್ಯಕೀಯ ಕಾಲೇಜಿನ ಫಾರ್ಮಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕಿಶೋರ್‌ ಮತ್ತು ಸ್ತ್ರೀರೋಗ ತಜ್ಞೆ ಡಾ. ರಶ್ಮಿ ಅವರ ಮಗ ಅರ್ಜುನ್‌ ಆಗದ್ದಾರೆ. ಇವರು ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 99.8 ರಷ್ಟು ಅಂಕ ಗಳಿಸಿದ್ದರು.

ದೇಶದಲ್ಲಿ ಮೊದಲ ರ್ಯಾಂಕ್‌ ಪಡೆದ 100 ವಿದ್ಯಾರ್ಥಿಗಳ ಪೈಕಿ 6 ಜನ ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆದಿದ್ದಾರೆ. ಅದರಲ್ಲಿ ಕರ್ನಾಟಕ ಅರ್ಜುನ್‌ ಕಿಶೋರ್‌ ಕೂಡಾ ಒಬ್ಬರಾಗಿದ್ದಾರೆ.

Tags: