Mysore
27
scattered clouds
Light
Dark

‘ಕಾವಾ’ ಪ್ರವೇಶಾತಿಗೆ ಅರ್ಜಿ ಅಹ್ವಾನ

ಮೈಸೂರು: ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಸಂಸ್ಥೆಯ 2024-25 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಬಿ.ವಿ.ಎ. (ದೃಶ್ಯಕಲೆ) ಸ್ನಾತಕ ಪದವಿ ಕೋರ್ಸಿನ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅನ್ವಯಕಲೆ, ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ, ಕಲಾ ಇತಿಹಾಸ ಕೋರ್ಸ್ಗಳಿಗೆ ದ್ವಿತೀಯ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಕಚೇರಿಯಿಂದ ಜೂನ್ 14 ರೊಳಗೆ ಅರ್ಜಿ ಪಡೆದು, ಜೂನ್ 19 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರವೇಶಾತಿ ದಾಖಲಾತಿಗಳ ಪರಿಶೀಲನೆ, ಪ್ರವೇಶ ಪರೀಕ್ಷೆ, ಮೌಖಿಕ ಸಂದರ್ಶನ ಜೂನ್ 20 ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0821 2438931 ಅನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಸಂಸ್ಥೆಯ ಡೀನ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.