ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನಲ್ಲಿ ಮತ್ತೊಂದು ಹುಲಿ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಬೆಳಗಿನ ಜಾವ ಸುಮಾರು 4 ಗಂಟೆಯ ಸುಮಾರಿಗೆ ದೇವಲಾಪುರ ಗ್ರಾಮದ ಅಳಗಂಚಿ ಅರಣ್ಯದ ಅಂಚಿನಲ್ಲಿ ಈ ಗಂಡು ಹುಲಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.
ಕಳೆದ ಕೆಲ ವಾರಗಳಿಂದ ಹಂಚೀಪುರ, ಸಾಗರೆ, ದೇವಲಾಪುರ ಸುತ್ತಮುತ್ತಲಿನ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿತ್ತು. ಹಲವು ದಿನಗಳ ಕಾರ್ಯಾಚರಣೆ ನಂತರ ಇಂದು ಬೆಳಗ್ಗೆ ಹುಲಿಯನ್ನು ಸೆರೆ ಹಿಡಿದ ಪರಿಣಾಮ, ಸ್ಥಳೀಯರು ನೆಮ್ಮದಿಯ ಬಿಟ್ಟಿದ್ದಾರೆ.
ಈ ಪ್ರದೇಶದಲ್ಲೇ ಕಳೆದ ಕೆಲವು ತಿಂಗಳಲ್ಲಿ ಸುಮಾರು 16 ಹುಲಿಗಳನ್ನು ಸೆರೆಹಿಡಿದಿದ್ದಾರೆ. ಈ ಹೊಸ ಸೆರೆ ಕಾರ್ಯಾಚರಣೆಯೊಂದಿಗೆ ಗ್ರಾಮಗಳಲ್ಲಿದ್ದ ಆತಂಕ ತಾತ್ಕಾಲಿಕವಾಗಿ ನಿವಾರಣೆಯಾಗಿದೆ.





