Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳ ಪ್ರಕಟ

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಪ್ರತಿ ವರ್ಷ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಇದೇ ತಿಂಗಳು ಸೆ. 21ರಂದು ನಡೆಯುವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ದೀಪಕ್‌, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್‌ ಅವರು, 2023-24ನೇ ಸಾಲಿನ ಜೀವಮಾನ ಸಾಧನೆ, ಹಿರಿಯ ಪತ್ರಕರ್ತರು, ಛಾಯಾಗ್ರಹಕರು ಸೇರಿದಂತೆ ವರ್ಷದ ಕನ್ನಡ, ಇಂಗ್ಲಿಷ್ ವರದಿಗಳು, ಅತ್ಯುತ್ತಮ ಛಾಯಾಚಿತ್ರ ಹಾಗೂ ವಿದ್ಯುನ್ಮಾನ ವರದಿಗೆ ಪ್ರಶಸ್ತಿ ವಿಜೇತರ ಹೆಸರುಗಳನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿಗಳ ವಿವಿರ:

ದಿನ ತಂತಿ ಪತ್ರಿಕೆಯ ಎಂ.ಎನ್.ಕಿರಣ್ ಕುಮಾರ್ (ಪತ್ರಿಕೋದ್ಯಮ ಕ್ಷೇತ್ರದ ಜೀವಮಾನ ಸಾಧನೆ)

ಪ್ರಜಾವಾಣಿ ಹಿರಿಯ ವರದಿಗಾರ ಸಾಲಿಗ್ರಾಮ ಯಶವಂತ್(ವರ್ಷದ ಹಿರಿಯ ಗ್ರಾಮಾಂತರ ಪತ್ರಕರ್ತ ಪ್ರಶಸ್ತಿ)

ವರ್ತಮಾನ್ ದಿನಪತ್ರಿಕೆ ಸುದ್ಧಿ ಸಂಪಾದಕ ಕೆ.ಎನ್. ನಾಗಸುಂದ್ರಪ್ಪ (ಹಿರಿಯ ಸುದ್ಧಿ ಸಂಪಾದಕ ಪ್ರಶಸ್ತಿ) 

ದಿ. ಹಿಂದು ದಿನಪತ್ರಿಕೆಯ  ಶ್ರೀರಾಮ್ (ಹಿರಿಯ ಛಾಯಾಗ್ರಾಹಕ ಪ್ರಶಸ್ತಿ)

ಈ ಟಿವಿ ಭಾರತ್ ಹಿರಿಯ ವರದಿಗಾರ ಮಹೇಶ್ ಶ್ರವಣಬೆಳಗೋಳ (ದೃಶ್ಯ ಮಾಧ್ಯಮ ಪ್ರಶಸ್ತಿ)

ವಿಸ್ತಾರ ಟಿವಿ ವಿಡಿಯೋಗ್ರಫರ್  ನಾಗೇಶ್.ಎಸ್  (ದೃಶ್ಯ ಮಾಧ್ಯಮ ಹಿರಿಯ ವಿಡಿಯೋಗ್ರಫರ್ ಪ್ರಶಸ್ತಿ) 

ಪ್ರಶಸ್ತಿ ಪುರಸ್ಕೃತರು :
ಇನ್ನು ಈ ಸಾಲಿನ ಉತ್ತಮ ಕನ್ನಡ ವರದಿಗೆ ಹೆಚ್.ಎಸ್ ಸಚೀತ್ (ಪ್ರಜಾವಾಣಿ ಪತ್ರಿಕೆ), ಇಂಗ್ಲೀಷ್ ವರದಿಗೆ ಶಿಲ್ಪಾ.ಪಿ (ಹಿರಿಯ ಪ್ರಧಾನ ವರದಿಗಾರ, ಡೆಕ್ಕನ್ ಹೆರಾಲ್ಡ್), ಉತ್ತಮ ಫೋಟೋಗ್ರ್ರಾಫಿಗೆ ಉದಯ್ ಶಂಕರ್.ಎಸ್ (ಇಂಡಿಯನ್ ಎಕ್ಸ್‌ ಪ್ರೆಸ್ಸ್ ಪತ್ರಿಕೆ), ವಿದ್ಯುನ್ಮಾನ ಮಾಧ್ಯಮದ ವರದಿ ಪ್ರಶಸ್ತಿಗಳಿಗೆ ಜಯಂತ್ ಮತ್ತು ರಾಮು‌ (ದೂರದರ್ಶನ) ಭಾಜನರಾಗಿದ್ದಾರೆ.

Tags: