ಮೈಸೂರು: ಕಾಡಾನೆಗಳು ಊರಿಗೆ ಬರದಂತೆ ಅರಣ್ಯ ಇಲಾಖೆಯು ಎಐ ಆಧಾರಿರ ಕೂಗು ಕ್ಯಾಮರಾವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅಳವಡಿಸಿದೆ.
ನಾಗರಹೊಳೆಯ ವೀರನಹೊಸಳ್ಳಿ ವಲಯ ವ್ಯಾಪ್ತಿಯ ಬೊಮ್ಮಲಾಪುರ ಹಾಡಿಯ ಗಡಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಈ ಕೂಗು ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
ಇದನ್ನು ಫಾರ್ಮ್‌ಗಾರ್ಡ್ ಎಂದೂ ಕರೆಯಲಾಗುತ್ತಿದೆ. ಕ್ಯಾಮರಾದಲ್ಲಿ ಸದ್ಯಕ್ಕೆ ಕಾಡನ್ನು ದಾಟಿ ಹೊರಬರುವ ಆನೆಗಳನ್ನು ಮಾತ್ರ ಗುರುತಿಸಿ ಕ್ರಿಯಾಶೀಲವಾಗುವಂತಹ ಪ್ರೋಗ್ರಾಂ ಮಾಡಿ ಅಳವಡಿಸಲಾಗಿದೆ.
ಕಾಡಿನಿಂದ ಊರುಗಳತ್ತ ಆಹಾರ ಆಹಾರ ಅರಸಿಕೊಂಡು ಕಾಡಾನೆಗಳು ಬರುತ್ತವೆ ಎಂದು ಗುರುತಿಸುವ ಮಾರ್ಗಗಳಲ್ಲಿ ಈ ಕೂಗು ಕ್ಯಾಮರಾ ಅಳವಡಿಸಲಾಗಿದೆ. ಆನೆಯು ಅರಣ್ಯದಿಂದ ಹೊರಬರುತ್ತಿರುವುದು ಕ್ಯಾಮರಾ ಕಣ್ಣಿಗೆ ಬಿದ್ದ ತಕ್ಷಣ, ಕ್ಯಾಮರಾದಲ್ಲಿ ಇರುವ ಧ್ವನಿವರ್ಧಕದ ಮೂಲಕ ಆನೆಯನ್ನು ವಿಚಲಿತಗೊಳಿಸುವ, ಭಯಬೀಳಿಸುವ ಸದ್ದುಗಳು ಜೋರಾಗಿ ಹೊರಬರುತ್ತದೆ.
ಈ ಸದ್ದಿಗೆ ಆನೆ ಭಯಗೊಂಡು ನಾಡಿಗೆ ಬಾರದೇ ಕಾಡಿಗೆ ಹಿಂದಿರುಗುತ್ತದೆ. ಕ್ಯಾಮರಾವು ಆನೆಯನ್ನು 150 ಮೀಟರ್ ದೂರದಲ್ಲೇ ಪತ್ತೆ ಹಚ್ಚಿಬಿಡುತ್ತದೆ. ಆ ರೀತಿಯಾಗಿ ಕ್ಯಾಮರಾಗಳಲ್ಲಿ ಪ್ರೋಗ್ರಾಂ ಅಳವಡಿಸಲಾಗಿದೆ.





