Mysore
25
scattered clouds

Social Media

ಭಾನುವಾರ, 28 ಜೂನ್ 2026
Light
Dark

ದೂರ ಗ್ರಾಮಕ್ಕೆ ನಟ ಪ್ರಭುದೇವ ಭೇಟಿ

ದೂರ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೂರ ಗ್ರಾಮಕ್ಕೆ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಶನಿವಾರ ಆಗಮಿಸಿದ್ದರು.

ಅವರು ಮೊದಲು ತಾವು ಜೀರ್ಣೋದ್ಧಾರಗೊಳಿಸಿದ್ದ ತಮ್ಮ ಕುಲ ದೇವರಾದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ತಾನು ಚಿಕ್ಕ ವಯಸ್ಸಿನಿಂದ ಆಡಿ ಬೆಳೆದ ದೂರ ಗ್ರಾಮದಲ್ಲಿರುವ ತಮ್ಮ ತೋಟದಲ್ಲಿ ನೆಲದ ಮೇಲೆ ಕುಳಿತು ತಮ್ಮ ಸ್ನೇಹಿತರೊಂದಿಗೆ ಸಾಮಾನ್ಯರಂತೆ ಊಟ ಸವಿದು ಕಾಲ ಕಳೆದರು.

ಈ ಸಂದರ್ಭದಲ್ಲಿ ಅವರ ಆತ್ಮೀಯ ಸ್ನೇಹಿತರಾದ ಸಿ.ಆರ್.ಮಂಜು, ಉಮೇಶ್ ಅವರ ಜೊತೆಗೂಡಿ ಊಟ ಸವಿದು ಕೆಲ ಕಾಲ ವಿಶ್ರಾಂತಿ ಪಡೆದರು. ನಂತರ ತಮಿಳಿನ ಖ್ಯಾತ ನಿರ್ದೇಶಕ ಭಾಗ್ಯರಾಜ್ ಅವರ ನಿಧನದ ಸುದ್ದಿ ತಿಳಿದು, ಶನಿವಾರ ಸಂಜೆ ಚೆನ್ನೈಗೆ ತೆರಳಿದರು.

Tags:
error: Content is protected !!